ಮುಂಬೈ (ಪಿಟಿಐ): ಸೋಮವಾರ (ಸೆ. 9) ಬಿಡುಗಡೆಯಾಗಲಿರುವ ಚಿನ್ನದ ಬಾಂಡ್‌ಗಳ ಪ್ರತಿ ಗ್ರಾಂ ಖರೀದಿ ಬೆಲೆಯನ್ನು ₹ 3,890 ರಂತೆ ನಿಗದಿಪಡಿಸಲಾಗಿದೆ.
2019–20ನೆ ಸಾಲಿನ ನಾಲ್ಕನೆ ಕಂತಿನ ಚಿನ್ನದ ಬಾಂಡ್ ಖರೀದಿಯು ಇದೇ 9ರಿಂದ 13ರವರೆಗೆ ನಡೆಯಲಿದೆ.
ಆನ್‌ಲೈನ್‌ನಲ್ಲಿ ಬಾಂಡ್ ಖರೀದಿಗೆ ಮುಂದಾಗುವ ಮತ್ತು ಡಿಜಿಟಲ್ ಮಾದರಿಯಲ್ಲಿ (ನಗದುರಹಿತ) ಹಣ ಪಾವತಿಸುವವರಿಗೆ ಪ್ರತಿ ಗ್ರಾಂಗೆ ₹ 50ರಂತೆ ರಿಯಾಯ್ತಿ ದೊರೆಯಲಿದೆ. ಈ ಆನ್‌ಲೈನ್ ಹೂಡಿಕೆದಾರರಿಗೆ ಪ್ರತಿ ಗ್ರಾಂಗೆ ₹ 3,840 ದರ ನಿಗದಿಪಡಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ವಿದೇಶಿ ವಿನಿಮಯ ಸಂಗ್ರಹ ಇಳಿಕೆ: ಆಗಸ್ಟ್ ತಿಂಗಳಾಂತ್ಯಕ್ಕೆ ದೇಶದ ವಿದೇಶ ವಿನಿಮಯ ಸಂಗ್ರಹವು, ₹ 3,122 ಕೋಟಿಗಳಷ್ಟು ಕಡಿಮೆಯಾಗಿ ₹ 30 ಲಕ್ಷ ಕೋಟಿಗಳಿಗೆ ತಲುಪಿದೆ.
ವಿದೇಶಿ ಕರೆನ್ಸಿ ಸಂಪತ್ತು ಕಡಿಮೆಯಾಗಿರುವುದರಿಂದ ಸಂಗ್ರಹದಲ್ಲಿ ಇಳಿಕೆಯಾಗಿದೆ. ಅದಕ್ಕೂ ಹಿಂದಿನ ವಾರ ವಿದೇಶಿ ವಿನಿಮಯ ಸಂಗ್ರಹವು ₹ 30.03 ಲಕ್ಷ ಕೋಟಿಗಳಷ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.