ADVERTISEMENT

ಚಿನ್ನದ ಬಾಂಡ್‌ವಿತರಣೆ: ಬೆಲೆ ಗ್ರಾಂಗೆ ₹ 4,777

ಪಿಟಿಐ
Published 15 ಮೇ 2021, 11:16 IST
Last Updated 15 ಮೇ 2021, 11:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: 2021–22ನೇ ಸಾಲಿನ ಚಿನ್ನದ ಬಾಂಡ್‌ನ ಮೊದಲ ಕಂತು ಸೋಮವಾರ ಆರಂಭವಾಗಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ನೀಡಿಕೆ ಬೆಲೆಯನ್ನು ಪ್ರತಿ ಗ್ರಾಂಗೆ ₹ 4,777ರಷ್ಟು ನಿಗದಿಪಡಿಸಿದೆ.

ಬಾಂಡ್‌ ಖರೀದಿಸಲು ಆನ್‌ಲೈನ್‌ ಮೂಲಕ ಹಣ ಪಾವತಿಸುವವರಿಗೆ ಪ್ರತಿ ಗ್ರಾಂಗೆ ₹ 50ರಂತೆ ವಿನಾಯಿತಿ ಸಿಗಲಿದೆ. ಹೀಗಾಗಿ ಇಂತಹ ಹೂಡಿಕೆದಾರರಿಗೆ ನೀಡಿಕೆ ಬೆಲೆ ₹ 4,727 ಇರಲಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಬಾಂಡ್‌ ಖರೀದಿಸಲು ಅವಕಾಶ ಇರಲಿದೆ. ಮೇ 25ರಂದು ಬಾಂಡ್‌ ವಿತರಣೆ ಆಗಲಿದೆ.

ADVERTISEMENT

ಬ್ಯಾಂಕುಗಳು (ಕಿರು ಹಣಕಾಸು ಬ್ಯಾಂಕ್ ಮತ್ತು ಪೇಮೆಂಟ್‌ ಬ್ಯಾಕ್ಸ್‌ ಹೊರತುಪಡಿಸಿ), ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ, ಅಂಚೆ ಕಚೇರಿ, ಬಿಎಸ್‌ಇ ಮತ್ತು ಎನ್‌ಎಸ್ಇ ಮೂಲಕ ಚಿನ್ನದ ಬಾಂಡ್‌ ಮಾರಾಟ ನಡೆಯಲಿದೆ.

ಕನಿಷ್ಠ ಹೂಡಿಕೆ 1 ಗ್ರಾಂ ಇರಲಿದೆ ಎಂದು ಸಚಿವಾಲಯವು ತಿಳಿಸಿದೆ. ಪ್ರಕಟಣೆಯ ಪ್ರಕಾರ, ವೈಯಕ್ತಿಕ ಖರೀದಿದಾರರಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಕ್ಕೆ 4 ಕೆ.ಜಿ ಹಾಗೂ ಟ್ರಸ್ಟ್‌ಗಳಿಗೆ 20 ಕೆ.ಜಿಯ ಗರಿಷ್ಠ ಮಿತಿ ನೀಡಲಾಗಿದೆ.

ಮೇ ತಿಂಗಳಿನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಒಟ್ಟು ಆರು ಕಂತುಗಳಲ್ಲಿ ಚಿನ್ನದ ಬಾಂಡ್ ವಿತರಣೆ ನಡೆಯಲಿದೆ ಎಂದು ಆರ್‌ಬಿಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.