ADVERTISEMENT

ಆನ್‌ಲೈನ್‌ನಲ್ಲಿ ಚಿನ್ನದ ಬಾಂಡ್‌

​ಪ್ರಜಾವಾಣಿ ವಾರ್ತೆ
Published 12 ಮೇ 2020, 19:30 IST
Last Updated 12 ಮೇ 2020, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು:ಚಿನ್ನದ ಬಾಂಡ್‌ ಹೂಡಿಕೆಯ ಸಂಕ್ಷಿಪ್ತ ಮಾಹಿತಿ...

ವಿತರಣೆ ದರ

ಆನ್‌ಲೈನ್‌:ಪ್ರತಿ ಗ್ರಾಂಗೆ ₹4,540

ADVERTISEMENT

ಆಫ್‌ಲೈನ್‌: ಪ್ರತಿಗ್ರಾಂಗೆ ₹4,590

ಅವಧಿ: 8 ವರ್ಷ

ಅವಧಿ ಮುಗಿಯುವುದಕ್ಕೂ ಮುನ್ನ 5 ವರ್ಷಗಳ ಬಳಿಕ ನಗದೀಕರಿಸಬಹುದು

ಹೂಡಿಕೆ

ಕನಿಷ್ಠ 1 ಗ್ರಾಂ, ಗರಿಷ್ಠ 400 ಗ್ರಾಂ

ಹಿಂದೂ ಅವಿಭಕ್ತ ಕುಟುಂಬವು ಗರಿಷ್ಠ 4 ಕೆ.ಜಿ

ಟ್ರಸ್ಟ್‌ಗಳು 20 ಕೆ.ಜಿ

ತೆರಿಗೆ: ಚಿನ್ನದ ಬಾಂಡ್‌ ಹೂಡಿಕೆಗೆ ಬರುವ ಬಡ್ಡಿದರಕ್ಕೆ ಆದಾಯ ತೆರಿಗೆ ಕಾಯ್ದೆ 1961ರಂತೆ ತೆರಿಗೆ ಕಟ್ಟಬೇಕಾಗುತ್ತದೆ. ಬಾಂಡ್‌ ಮೌಲ್ಯವನ್ನುಭೌತಿಕ ರೂಪದಲ್ಲಿ ಚಿನ್ನದ ರೂಪದಲ್ಲಿ ಪಡೆದರೆ ಅದಕ್ಕೆ ಬಂಡವಾಳ ಗಳಿಕೆ ತೆರಿಗೆ ಅನ್ವಯಿಸಲಿದೆ.

ಹೂಡಿಕೆಯ ಪ್ರಯೋಜನಗಳು

* ಆರಂಭಿಕ ಹೂಡಿಕೆಗೆ ವರ್ಷಕ್ಕೆ ಶೇ 2.50ರಂತೆ ಬಡ್ಡಿದರ ಸಿಗಲಿದೆ. ಅರ್ಧವರ್ಷಕ್ಕೆ ಬಡ್ಡಿದರ ಸಂದಾಯವಾಗಲಿದೆ

* ಭೌತಿಕ ರೂಪದ ಚಿನ್ನಕ್ಕಿಂತ ಉತ್ತಮ ಗಳಿಕೆ. ಇಂಡಿಯನ್‌ ಬುಲಿಯನ್ ಆ್ಯಂಡ್‌ ಜುವೆಲ್ಸ್‌ ಅಸೋಸಿಯೇಷನ್‌ ಘೋಷಿಸುವ ದರದ ಆಧಾರದ ಮೇಲೆ ಆರ್‌ಬಿಐ ನೀಡಿಕೆ ದರ ನಿಗದಿಪಡಿಸುತ್ತದೆ

* ಚಿನ್ನಾಭರಣಗಳ ಖರೀದಿಗೆ ಇರುವಂತೆ ತಯಾರಿಕಾ ಶುಲ್ಕ, ಜಿಎಸ್‌ಟಿ ಇರುವುದಿಲ್ಲ. ಶುದ್ಧತೆಯ ಸಮಸ್ಯೆಯೂ ಉದ್ಭವಿಸುವುದಿಲ್ಲ

* ವಾರ್ಷಿಕ ವೆಚ್ಚ ಇರುವುದಿಲ್ಲ

* ಬಾಂಡ್‌ ರೂಪದಲ್ಲಿ ಪಡೆದರೆ ಬಂಡವಾಳ ಗಳಿಕೆ ತೆರಿಗೆ ಇಲ್ಲ

* ಭಾರತ ಸರ್ಕಾರದ ಪರವಾಗಿ ಆರ್‌ಬಿಐ ಬಾಂಡ್‌ ನೀಡುತ್ತದೆ

*ಬಾಂಡ್‌ ಖರೀದಿಗೆ ಗರಿಷ್ಠ ₹ 20 ಸಾವಿರದವರೆಗೆ ನಗದು ಕೊಡಬಹುದು ಅಥವಾ ಡಿಮ್ಯಾಂಡ್‌ ಡ್ರಾಫ್ಟ್‌ ಅಥವಾ ಚೆಕ್‌ ನೀಡಬಹುದು

* ಸಾಲವನ್ನು ಪಡೆಯಲು ಚಿನ್ನದ ಬಾಂಡ್‌ ಅನ್ನು ಆಧಾರವಾಗಿ ಇಡಬಹುದು

* ಷೇರು ವಿನಿಮಯ ಕೇಂದ್ರಗಳ ಮೂಲಕ ಮಾರಾಟ ಮಾಡಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.