ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಧಾರಣೆಯು ಏರಿಕೆ ಕಂಡಿದೆ.
10 ಗ್ರಾಂ ಚಿನ್ನದ ದರವು ₹370 ಏರಿಕೆಯಾಗಿ, ₹72,550ಕ್ಕೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹600 ಹೆಚ್ಚಳವಾಗಿ, ₹91,200ಕ್ಕೆ ಮುಟ್ಟಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್ಗೆ (28.34 ಗ್ರಾಂ) ಕ್ರಮವಾಗಿ 2,322 ಡಾಲರ್ (ಅಂದಾಜು ₹1.93 ಲಕ್ಷ) ಮತ್ತು 29.20 ಡಾಲರ್ನಂತೆ (ಅಂದಾಜು ₹2,434) ಮಾರಾಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.