ನವದೆಹಲಿ: ದೇಶದ ಚಿನ್ನದ ಬೇಡಿಕೆಯು 2019ರಲ್ಲಿ ಶೇ 9ರಷ್ಟು ಇಳಿಕೆಯಾಗಿದ್ದು 690 ಟನ್‌ಗಳಷ್ಟಾಗಿದೆ ಎಂದು ವಿಶ್ವ ಚಿನ್ನ ಮಂಡಳಿಯು (ಡಬ್ಲ್ಯುಜಿಸಿ) ತಿಳಿಸಿದೆ.
ಮೌಲ್ಯದ ಲೆಕ್ಕದಲ್ಲಿ ಶೇ 3ರಷ್ಟು ಏರಿಕೆಯಾಗಿದ್ದು, ₹ 2,17,770 ಕೋಟಿಗೆ ತಲುಪಿದೆ. 2018ರಲ್ಲಿ ₹ 2,11,860 ಕೋಟಿ ಇತ್ತು.
ಚಿನ್ನದ ಧಾರಣೆ ಗರಿಷ್ಠ ಮಟ್ಟದಲ್ಲಿರುವುದು ಹಾಗೂ ಮಂದಗತಿಯ ಆರ್ಥಿಕ ಬೆಳವಣಿಗೆಯು ರಿಟೇಲ್ ಖರೀದಿ ಮೇಲೆ ಪರಿಣಾಮ ಬೀರಿದೆ.
ದೇಶಿ ಚಿನ್ನದ ಬೆಲೆ 2019ರ ವರ್ಷಾಂತ್ಯದಲ್ಲಿ 10ಗ್ರಾಂಗೆ ₹ 40 ಸಾವಿರದ ಆಸುಪಾಸಿನಲ್ಲಿತ್ತು. 2018ರಲ್ಲಿ ಇದ್ದ ಧಾರಣೆಗೆ ಹೋಲಿಸಿದರೆ ಶೇ 24ರಷ್ಟು ಏರಿಕೆ ಕಂಡಿದೆ.
‘ಹಾಲ್‌ಮಾರ್ಕ್ ಕಡ್ಡಾಯಗೊಳಿಸುವುದೂ ಸೇರಿದಂತೆ ಹಲವು ಬದಲಾವಣೆಗಳು ದೀರ್ಘಾವಧಿಯಲ್ಲಿ ಸಂಘಟಿತ ವಲಯದಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುವಂತೆ ಮಾಡಲಿದೆ’ ಎಂದು ಸಮಿತಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರಂ ಪಿ.ಆರ್. ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.