ADVERTISEMENT

Gold and Silver Rate: ಚಿನ್ನದ ದರ ₹1,300, ಬೆಳ್ಳಿ ₹4,600 ಇಳಿಕೆ

ಪಿಟಿಐ
Published 4 ನವೆಂಬರ್ 2024, 14:13 IST
Last Updated 4 ನವೆಂಬರ್ 2024, 14:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಸೋಮವಾರ ಭಾರಿ ಇಳಿಕೆಯಾಗಿದೆ.

ಬೆಳ್ಳಿ ದರವು ಕೆ.ಜಿಗೆ ₹4,600 ಇಳಿಕೆಯಾಗಿ, ₹94,900ರಂತೆ ಮಾರಾಟವಾಗಿದೆ. 10 ಗ್ರಾಂ ಚಿನ್ನದ ದರವು ₹1,300 ಕಡಿಮೆಯಾಗಿ ₹81,100ಕ್ಕೆ ಇಳಿದಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್‌ ತಿಳಿಸಿದೆ.

ಇಳಿಕೆಗೆ ಕಾರಣಗಳೇನು?: 

ಚಿನ್ನ ಮತ್ತು ಬೆಳ್ಳಿ ದರ ಏರಿಕೆಯಿಂದಾಗಿ ಆಭರಣ ತಯಾರಕರು ಮತ್ತು ಗ್ರಾಹಕರಿಂದ ಬೇಡಿಕೆ ಕಡಿಮೆ ಆಗಿದ್ದರಿಂದ ಧಾರಣೆ ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು, ಅಮೆರಿಕದ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ಅನಿಶ್ಚಿತತೆಯು ಸಹ ಬೆಲೆ ಇಳಿಕೆಗೆ ಕಾರಣವಾದವು ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.