ADVERTISEMENT

ಚಿನ್ನದ ಇಟಿಎಫ್‌: ₹ 303 ಕೋಟಿ ಹೂಡಿಕೆ

ಪಿಟಿಐ
Published 11 ನವೆಂಬರ್ 2021, 14:43 IST
Last Updated 11 ನವೆಂಬರ್ 2021, 14:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ಅಕ್ಟೋಬರ್‌ನಲ್ಲಿ ₹ 303 ಕೋಟಿ ಬಂಡವಾಳ ಹೂಡಿಕೆ ಆಗಿದೆ. ಸೆಪ್ಟೆಂಬರ್‌ನಲ್ಲಿ ಆಗಿದ್ದ ₹ 446 ಕೋಟಿಗೆ ಹೋಲಿಸಿದರೆ ಇಳಿಕೆ ಕಂಡುಬಂದಿದೆ.

‘ಚಿನ್ನದ ಇಟಿಎಫ್‌ಗಳಲ್ಲಿ ಅಕ್ಟೋಬರ್‌ನಲ್ಲಿ ಆಗಿರುವ ಹೂಡಿಕೆಯು ಭರವಸೆ ಮೂಡಿಸಿದೆ. ನಿರೀಕ್ಷೆಯಂತೆಯೇ ಹಬ್ಬದ ಅವಧಿಯು ಚಿನ್ನದ ಇಟಿಎಫ್‌ಗೆ ಬೇಡಿಕೆ ಬರುವಂತೆ ಮಾಡಿದೆ. ಈ ಬಾರಿಯ ಧನ್‌ತೇರಸ್‌ನಲ್ಲಿ 50 ಟನ್‌ ಚಿನ್ನ ಮಾರಾಟ ಆಗಿದ್ದು, 2019ರ ಧನ್‌ತೇರಸ್‌ ಅವಧಿಯಲ್ಲಿ ಆಗಿದ್ದ ಮಾರಾಟಕ್ಕೆ ಹೋಲಿಸಿದರೆ 20 ಟನ್‌ ಹೆಚ್ಚು’ ಎಂದು ಎಲ್‌ಎಕ್ಸ್‌ಎಂಇ (LXME) ಸ್ಥಾಪಕಿ ಪ್ರೀತಿ ರಾಠಿ ಗುಪ್ತಾ ಹೇಳಿದ್ದಾರೆ. ಚಿನ್ನದ ಇಟಿಎಫ್‌ಗಳ ನಿರ್ವಹಣಾ ಸಂಪತ್ತು ಮೌಲ್ಯವು ₹ 16,337 ಕೋಟಿಯಿಂದ ₹ 17,320 ಕೋಟಿಗೆ ಏರಿಕೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT