ADVERTISEMENT

ಬೆಂಗಳೂರು: ಕೆ.ಜಿ ಬೆಳ್ಳಿ ದರ ₹98,200

Venugopala K.
ಪಿಟಿಐ
Published 4 ಅಕ್ಟೋಬರ್ 2024, 16:04 IST
Last Updated 4 ಅಕ್ಟೋಬರ್ 2024, 16:04 IST
<div class="paragraphs"><p>ಬೆಳ್ಳಿ(ಪ್ರಾತಿನಿಧಿಕ ಚಿತ್ರ)</p></div>

ಬೆಳ್ಳಿ(ಪ್ರಾತಿನಿಧಿಕ ಚಿತ್ರ)

   

ನವದೆಹಲಿ: ನವರಾತ್ರಿ ಅಂಗವಾಗಿ ದೇಶೀಯ ಆಭರಣ ತಯಾರಕರು ಮತ್ತು ಗ್ರಾಹಕರಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಶುಕ್ರವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಕೆಯಾಗಿದೆ.): ನವರಾತ್ರಿ ಅಂಗವಾಗಿ ದೇಶೀಯ ಆಭರಣ ತಯಾರಕರು ಮತ್ತು ಗ್ರಾಹಕರಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಶುಕ್ರವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ₹79,980ಕ್ಕೆ ತಲುಪಿದ್ದರೆ, ಬೆಳ್ಳಿ ಧಾರಣೆಯು ಕೆ.ಜಿ ₹98,200 ಆಗಿದೆ.

ADVERTISEMENT

ದೆಹಲಿಯ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ದರವು 10 ಗ್ರಾಂಗೆ ₹150 ಏರಿಕೆಯಾಗಿ, ₹78,450ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆ ಕೆ.ಜಿಗೆ ₹1,035 ಏರಿಕೆಯಾಗಿ ₹94,200ಕ್ಕೆ ಮುಟ್ಟಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್‌ ತಿಳಿಸಿದೆ.

‘ಅಮೆರಿಕದ ಫೆಡರಲ್‌ ರಿಸರ್ವ್‌ನಿಂದ ಮತ್ತೆ ಬಡ್ಡಿದರ ಕಡಿತದ ನಿರೀಕ್ಷೆ ಹೆಚ್ಚಿದೆ. ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ’ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.