ADVERTISEMENT

ಚಿನ್ನ ಆಮದು ₹ 51 ಸಾವಿರ ಕೋಟಿಗೆ ಹೆಚ್ಚಳ: ವಾಣಿಜ್ಯ ಸಚಿವಾಲಯ ಮಾಹಿತಿ

ಪಿಟಿಐ
Published 27 ಜೂನ್ 2021, 13:35 IST
Last Updated 27 ಜೂನ್ 2021, 13:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಚಿನ್ನದ ಆಮದು ಮೌಲ್ಯವು ಈ ವರ್ಷದ ಏಪ್ರಿಲ್‌–ಮೇ ಅವಧಿಯಲ್ಲಿ ₹ 51,438.82 ಕೋಟಿಗೆ ಏರಿಕೆ ಆಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹ 599 ಕೋಟಿ ಮೌಲ್ಯದ ಚಿನ್ನ ಆಮದಾಗಿತ್ತು ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ಇದೇ ಅವಧಿಯಲ್ಲಿ ಬೆಳ್ಳಿ ಆಮದು ಶೇಕಡ 93.7ರಷ್ಟು ಇಳಿಕೆ ಆಗಿದ್ದು, ಮೌಲ್ಯದ ಲೆಕ್ಕದಲ್ಲಿ ₹ 203 ಕೋಟಿಗಳಷ್ಟಾಗಿದೆ.

ಚಿನ್ನದ ಆಮದು ಹೆಚ್ಚಾಗಿರುವುದರಿಂದ ಆಮದು ಮತ್ತು ರಫ್ತು ವಹಿವಾಟಿನ ನಡುವಣ ಅಂತರವಾದ ವ್ಯಾಪಾರ ಕೊರತೆಯು ₹ 73,334 ಕೋಟಿಯಿಂದ ₹ 1.58 ಲಕ್ಷ ಕೋಟಿಗೆ ಏರಿಕೆ ಆಗಿದೆ.

ADVERTISEMENT

ಹರಳು ಮತ್ತು ಚಿನ್ನಾಭರಣ ರಫ್ತು ಪ್ರಸಕ್ತ ಹಣಕಾಸು ವರ್ಷದ ಎರಡು ತಿಂಗಳಿನಲ್ಲಿ ₹ 46,916 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 8,140 ಕೋಟಿಗಳಷ್ಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.