ADVERTISEMENT

ಚಿನ್ನ ಆಮದು ಶೇ 3.3ರಷ್ಟು ಇಳಿಕೆ: ಕೇಂದ್ರ ವಾಣಿಜ್ಯ ಸಚಿವಾಲಯ

ಪಿಟಿಐ
Published 21 ಮಾರ್ಚ್ 2021, 14:12 IST
Last Updated 21 ಮಾರ್ಚ್ 2021, 14:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಚಿನ್ನದ ಆಮದು 2020ರ ಏಪ್ರಿಲ್‌ನಿಂದ 2021ರ ಫೆಬ್ರುವರಿವರೆಗಿನ ಅವಧಿಯಲ್ಲಿ ಶೇಕಡ 3.3ರಷ್ಟು ಇಳಿಕೆ ಆಗಿದ್ದು ₹1.90 ಲಕ್ಷ ಕೋಟಿಗಳಿಗೆ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.

2019–20ರ ಏಪ್ರಿಲ್‌–ಫೆಬ್ರುವರಿ ಅವಧಿಯಲ್ಲಿ ಚಿನ್ನದ ಆಮದು ಮೌಲ್ಯ ₹ 1.97 ಲಕ್ಷ ಕೋಟಿಗಳಷ್ಟಾಗಿತ್ತು. ಚಿನ್ನದ ಆಮದು ಇಳಿಕೆ ಆಗಿರುವುದರಿಂದ ದೇಶದ ವ್ಯಾಪಾರ ಕೊರತೆ ಅಂತರ ₹ 61.7 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 11.05 ಲಕ್ಷ ಕೋಟಿಗಳಷ್ಟಿತ್ತು.

ಏಪ್ರಿಲ್‌–ಫೆಬ್ರುವರಿ ಅವಧಿಯಲ್ಲಿ ಹರಳು ಮತ್ತು ಚಿನ್ನಾಭರಣ ರಫ್ತು ಶೇ 33.86ರಷ್ಟು ಇಳಿಕೆ ಆಗಿದೆ.

ADVERTISEMENT

2020ರ ಫೆಬ್ರುವರಿಗೆ ಹೋಲಿಸಿದರೆ 2021ರ ಫೆಬ್ರುವರಿಯಲ್ಲಿ ಚಿನ್ನದ ಆಮದು ₹ 17,228 ಕೋಟಿಗಳಿಂದ ₹ 38,690 ಕೋಟಿಗಳಿಗೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.