ADVERTISEMENT

Gold and Silver Rate: ಚಿನ್ನದ ದರ ಮತ್ತೆ ₹1,400 ಏರಿಕೆ

ಪಿಟಿಐ
Published 21 ನವೆಂಬರ್ 2024, 13:48 IST
Last Updated 21 ನವೆಂಬರ್ 2024, 13:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಚಿನ್ನದ ದರ ಏರಿಕೆಯಾಗಿದ್ದರೆ, ಬೆಳ್ಳಿ ಧಾರಣೆಯು ಸ್ಥಿರವಾಗಿದೆ.

10 ಗ್ರಾಂ ಚಿನ್ನದ ದರವು (ಶೇ 99.9 ಪರಿಶುದ್ಧತೆ) ₹1,400 ಏರಿಕೆಯಾಗಿದ್ದು, ₹79,300 ಆಗಿದೆ. ಸ್ಟ್ಯಾಂಡರ್ಡ್‌ ಚಿನ್ನದ (ಶೇ 99.5 ಶುದ್ಧತೆ) ದರವು 10 ಗ್ರಾಂಗೆ ಇಷ್ಟೇ ಪ್ರಮಾಣದಲ್ಲಿ ಹೆಚ್ಚಳವಾಗಿ, ₹78,900 ಆಗಿದೆ.

ಬೆಳ್ಳಿ ಬೆಲೆಯು ಕೆ.ಜಿಗೆ ₹93 ಸಾವಿರ ಇದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್‌ ತಿಳಿಸಿದೆ.

ADVERTISEMENT

ಆಭರಣ ತಯಾರಕರು ಮತ್ತು ಖರೀದಿದಾರರಿಂದ ಹೆಚ್ಚಿದ ಬೇಡಿಕೆಯಿಂದಾಗಿ ಚಿನ್ನದ ದರವು ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.