ADVERTISEMENT

ಬೆಳ್ಳಿ ಧಾರಣೆ ₹1,200 ಏರಿಕೆ

ಪಿಟಿಐ
Published 4 ಜುಲೈ 2024, 16:16 IST
Last Updated 4 ಜುಲೈ 2024, 16:16 IST
   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿ ಧಾರಣೆಯು ಏರಿಕೆ ಕಂಡಿದೆ.

ಬೆಳ್ಳಿ ಧಾರಣೆಯು ಕೆ.ಜಿಗೆ ₹1,200 ಹೆಚ್ಚಳವಾಗಿ, ₹92,500ಕ್ಕೆ ಮುಟ್ಟಿದೆ. 10 ಗ್ರಾಂ ಚಿನ್ನದ ದರವು ₹530 ಏರಿಕೆಯಾಗಿ, ₹73,080ರಂತೆ ಮಾರಾಟವಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,355 ಡಾಲರ್‌ (ಅಂದಾಜು ₹1.96 ಲಕ್ಷ) ಮತ್ತು 30.25 ಡಾಲರ್‌ನಂತೆ (ಅಂದಾಜು ₹2,526) ಮಾರಾಟವಾಗಿದೆ.

ADVERTISEMENT

ಚಿನ್ನದ ದರವು ಕಳೆದ ಎರಡು ವಾರದಲ್ಲಿ ಶೇ 1ರಷ್ಟು ಮತ್ತು ಬೆಳ್ಳಿ ಧಾರಣೆಯು ಶೇ 2ಕ್ಕೂ ಹೆಚ್ಚು ಏರಿಕೆಯಾಗಿದೆ. ಅಮೆರಿಕದ ಫೆಡರಲ್‌ ರಿಸರ್ವ್‌ ಸೆಪ್ಟೆಂಬರ್‌ನಲ್ಲಿ ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಇದೆ. ಇದು ಡಾಲರ್‌ ಮೌಲ್ಯ ಇಳಿಕೆಗೆ ಕಾರಣವಾಯಿತು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.