ADVERTISEMENT

ಬೆಳ್ಳಿ ದರ ಕೆ.ಜಿಗೆ ₹5 ಸಾವಿರ ಏರಿಕೆ

ಪಿಟಿಐ
Published 21 ಅಕ್ಟೋಬರ್ 2024, 15:32 IST
Last Updated 21 ಅಕ್ಟೋಬರ್ 2024, 15:32 IST
   

ನವದೆಹಲಿ/ಬೆಂಗಳೂರು: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ ಬೆಳ್ಳಿ ಧಾರಣೆಯಲ್ಲಿ ಭಾರಿ ಏರಿಕೆಯಾಗಿದೆ.

ಬೆಳ್ಳಿ ಧಾರಣೆಯು ಕೆ.ಜಿಗೆ ₹5 ಸಾವಿರ ಏರಿಕೆಯಾಗಿ ₹99,500ಕ್ಕೆ ಮುಟ್ಟಿದೆ. ಇದೇ ವೇಳೆ ಚಿನ್ನದ ದರವು 10 ಗ್ರಾಂಗೆ ₹750 ಹೆಚ್ಚಳವಾಗಿ ₹80,650ರಂತೆ ಮಾರಾಟವಾಗಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್‌ ತಿಳಿಸಿದೆ.

ಬೆಂಗಳೂರಿನಲ್ಲಿ ಕೆ.ಜಿ. ಬೆಳ್ಳಿ ಧಾರಣೆ ₹1.03 ಲಕ್ಷಕ್ಕೆ ಮುಟ್ಟಿದ್ದರೆ, 10 ಗ್ರಾಂ ಚಿನ್ನದ ದರವು ₹82,020 ಆಗಿದೆ.

ADVERTISEMENT

ಏರಿಕೆಗೆ ಕಾರಣವೇನು?: ಹಬ್ಬದ ಋತು ಮತ್ತು ಮದುವೆ ಅಂಗವಾಗಿ ಬೇಡಿಕೆ ಹೆಚ್ಚಿರುವುದು, ಸ್ಥಳೀಯ ಆಭರಣ ತಯಾರಕರಿಂದ ಖರೀದಿಯಲ್ಲಿ ಹೆಚ್ಚಳ, ಕೈಗಾರಿಕೆಗಳಲ್ಲಿ ಹೆಚ್ಚಿದ ಬೇಡಿಕೆ, ಚಿನ್ನದ ಬೆಲೆ ಏರಿಕೆಯಿಂದ ಹೂಡಿಕೆದಾರರು ಹಾಗೂ ಖರೀದಿದಾರರು ಬೆಳ್ಳಿ ಖರೀದಿಸಲು ಮುಂದಾಗಿರುವುದರಿಂದ ಬೆಲೆ ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.