ADVERTISEMENT

₹75 ಸಾವಿರ ಗಡಿ ದಾಟಿದ ಅಪರಂಜಿ ಚಿನ್ನದ ಬೆಲೆ

ಪಿಟಿಐ
Published 10 ಜುಲೈ 2024, 12:50 IST
Last Updated 10 ಜುಲೈ 2024, 12:50 IST
<div class="paragraphs"><p>ಚಿನ್ನ, ಬೆಳ್ಳಿ</p></div>

ಚಿನ್ನ, ಬೆಳ್ಳಿ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ ಬುಧವಾರ ₹400ರಷ್ಟು ಹೆಚ್ಚಳವಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ ₹75,050ಕ್ಕೆ ನಿಗದಿಯಾಗಿದೆ ಎಂದು ಅಖಿಲ ಭಾರತ ಸರಾಫ್ ಒಕ್ಕೂಟ ತಿಳಿಸಿದೆ.

ADVERTISEMENT

ಮಂಗಳವಾರ ಪ್ರತಿ ಹತ್ತು ಗ್ರಾಂ ಚಿನ್ನದ ದರ ₹74,650ರಷ್ಟಿತ್ತು. ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರತಿ ಕೆ.ಜಿ. ಬೆಳ್ಳಿಗೆ ₹94,400 ಇದೆ. ದೇಶೀಯ ಮಾರುಕಟ್ಟೆಯಲ್ಲಿ ಹಳದಿ ಲೋಹಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದ್ದರಿಂದ, ಚಿನ್ನದ ಬೆಲೆ ಏರುಮುಖಿಯಾಗಿದೆ ಎಂದೆನ್ನಲಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ (28.34 ಗ್ರಾಂ) 2,380 ಅಮೆರಿಕನ್ ಡಾಲರ್‌ನಷ್ಟು ದರ ನಿಗದಿಯಾಗಿದೆ. ಪ್ರತಿ ಔನ್ಸ್‌ ಮೇಲೆ 12.60 ಅಮೆರಿಕನ್ ಡಾಲರ್‌ನಷ್ಟು ಬೆಲೆ ಹೆಚ್ಚಳವಾಗಿದೆ.

‘ಅಮೆರಿಕ ಸದ್ಯ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಹಣದುಬ್ಬರ ಒಂದೇ ಕಾರಣವಲ್ಲ. ಬ್ಯಾಂಕ್‌ನ ಬಡ್ಡಿದರ ಕಡಿತವಾಗುತ್ತಿದ್ದಂತೆ ಚಿನ್ನ ಹಾಗೂ ಬೆಳ್ಳಿಯ ಬೆಲೆ ಹೆಚ್ಚಳವಾಗಿದೆ. ಇದು ಅಮೆರಿಕದ ಮಾರುಕಟ್ಟೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ’ ಫೆಡರಲ್ ಚೇರ್‌ನ ಪೋವಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.