ನವದೆಹಲಿ: ಬುಧವಾರ 10 ಗ್ರಾಂಚಿನ್ನದ ದರವು ದಾಖಲೆಯ ₹55,000 ಮಟ್ಟವನ್ನು ತಲುಪಿದ್ದು, ಬೆಳ್ಳಿ ದರ ಸಹ ಏರುಗತಿಯಲ್ಲಿದೆ.
ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್ ) 10 ಗ್ರಾಂ ಚಿನ್ನದ ಫ್ಯೂಚರ್ಸ್ ಶೇಕಡ 1.4ರಷ್ಟು ಏರಿಕೆಯಾಗಿ ₹55,190 ತಲುಪಿದೆ. ಇದರೊಂದಿಗೆ ಪ್ರತಿ ಕೆ.ಜಿ. ಬೆಳ್ಳಿ ದರ ಶೇಕಡ 1.8ರಷ್ಟು ಹೆಚ್ಚಳವಾಗಿ ₹72,698 ಮುಟ್ಟಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ 19 ತಿಂಗಳ ಗರಿಷ್ಠ ಮಟ್ಟದಲ್ಲಿದೆ.
2020ರ ಆಗಸ್ಟ್‌ನಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 2,072 ಡಾಲರ್ ತಲುಪಿತ್ತು. ಆಗ ಭಾರತದಲ್ಲಿ 10 ಗ್ರಾಂ ಚಿನ್ನದ ದರ ₹56,200 ಆಗಿತ್ತು.
ರಷ್ಯಾದಿಂದ ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳುವುದರ ವಿರುದ್ಧ ಅಮೆರಿಕ ನಿರ್ಬಂಧ ಹೇರಿರುವ ಬೆನ್ನಲ್ಲೇ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯತ್ತ ಮುಖ ಮಾಡಿದ್ದಾರೆ.
ದೇಶದ ಚಿನಿವಾರ ಪೇಟೆಯಲ್ಲಿ ಈ ತಿಂಗಳು 10 ಗ್ರಾಂ ಚಿನ್ನದ ದರ ₹2,850ರಷ್ಟು ಏರಿಕೆಯಾಗಿದೆ ಹಾಗೂ ಬೆಳ್ಳಿ ದರವು ಕೆ.ಜಿ.ಗೆ ₹5,500 ಹೆಚ್ಚಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.