ನವದೆಹಲಿ: ಹಬ್ಬ ಮತ್ತು ಮದುವೆ ಋತುವಿನ ಅಂಗವಾಗಿ ಸತತ ಆರನೇ ದಿನವಾದ ಬುಧವಾರದ ವಹಿವಾಟಿನಲ್ಲೂ ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಕೆಯಾಗಿದೆ.
10 ಗ್ರಾಂ ಚಿನ್ನದ ದರವು ₹500 ಹೆಚ್ಚಳವಾಗಿ ₹81,500ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹1 ಸಾವಿರ ಏರಿಕೆಯಾಗಿ, ₹1.02 ಲಕ್ಷಕ್ಕೆ ಮುಟ್ಟಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಕಳೆದ 6 ದಿನದ ವಹಿವಾಟಿನಲ್ಲಿ ಬೆಳ್ಳಿ ದರವು ಕೆ.ಜಿಗೆ ₹10 ಸಾವಿರ ಏರಿಕೆಯಾಗಿದ್ದರೆ, 10 ಗ್ರಾಂ ಚಿನ್ನದ ದರದಲ್ಲಿ ₹2,850 ಹೆಚ್ಚಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.