ನವದೆಹಲಿ (ಪಿಟಿಐ): ಸ್ಥಳೀಯ ಮಾರುಕಟ್ಟೆಯಲ್ಲಿ ಆಭರಣ ತಯಾರಕರು ಮತ್ತು ಕೈಗಾರಿಕೆಗಳಲ್ಲಿ ಬೇಡಿಕೆ ಕಡಿಮೆಯಾಗಿದ್ದರಿಂದ ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಇಳಿಕೆಯಾಗಿದೆ.
ಚಿನ್ನದ ದರವು 10 ಗ್ರಾಂ ಗೆ ₹300 ಇಳಿಕೆಯಾಗಿ, ₹81,200ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆ ಕೆ.ಜಿಗೆ ₹1 ಸಾವಿರ ಕಡಿಮೆಯಾಗಿ ₹1.01 ಲಕ್ಷಕ್ಕೆ ಇಳಿದಿದೆ. ಆರು ದಿನದ ವಹಿವಾಟಿನ ಬಳಿಕ ಬೆಲೆಯು ಇಳಿಕೆಯಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.