ADVERTISEMENT

ಚಿನ್ನ, ಬೆಳ್ಳಿ ದರ ಅಲ್ಪ ಏರಿಕೆ

ಪಿಟಿಐ
Published 26 ಜುಲೈ 2024, 15:44 IST
Last Updated 26 ಜುಲೈ 2024, 15:44 IST
<div class="paragraphs"><p>ಚಿನ್ನ, ಬೆಳ್ಳಿ</p></div>

ಚಿನ್ನ, ಬೆಳ್ಳಿ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ಸತತ ಮೂರು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಧಾರಣೆಯು ಶುಕ್ರವಾರದ ವಹಿವಾಟಿನಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.

ADVERTISEMENT

ಚಿನ್ನದ ದರವು 10 ಗ್ರಾಂಗೆ ₹50 ಏರಿಕೆಯಾಗಿ, ₹70,700ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹400 ಹೆಚ್ಚಳವಾಗಿ, ₹84,400ಕ್ಕೆ ತಲುಪಿದೆ.

ಶೇ 7ರಷ್ಟು ಇಳಿಕೆ

ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ಕಸ್ಟಮ್ಸ್‌ ಸುಂಕವನ್ನು ಕಡಿತಗೊಳಿಸಿದೆ. ಹಾಗಾಗಿ, ಜುಲೈ 23ರಿಂದ ಇಲ್ಲಿಯವರೆಗೆ ಚಿನ್ನದ ದರವು ಪ್ರತಿ ಗ್ರಾಂಗೆ ₹5,000 ಇಳಿಕೆಯಾಗಿದೆ. ಒಟ್ಟಾರೆ ದೇಶೀಯ ಮಾರುಕಟ್ಟೆಯಲ್ಲಿ ಶೇ 7ರಷ್ಟು ದರ ಕುಸಿದಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

‘ಬೆಲೆ ಇಳಿಕೆಯಾಗಿದೆ. ಇದರಿಂದ ಚಿನ್ನದ ಮೇಲಿನ ಹೂಡಿಕೆಗೆ ಉತ್ತೇಜನ ಸಿಗಲಿದೆ. ಕರೆನ್ಸಿ ಮೌಲ್ಯ ಇಳಿಕೆ ಹಾಗೂ ಚಿಲ್ಲರೆ ಹಣದುಬ್ಬರದಿಂದ ಪಾರಾಗಲು ಹಳದಿ ಲೋಹದ ಮೇಲಿನ ಹೂಡಿಕೆಯು ಹೆಚ್ಚು ಪ್ರಯೋಜನಕಾರಿಯಾಗಿದೆ’ ಎಂದು ಹಣಕಾಸು ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.