ನವದೆಹಲಿ: ಮದುವೆಯ ಋತು ಅಂಗವಾಗಿ ಆಭರಣ ತಯಾರಕರು ಮತ್ತು ಖರೀದಿದಾರರಿಂದ ಹೆಚ್ಚಿದ ಬೇಡಿಕೆಯಿಂದ ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಸೋಮವಾರದ ವಹಿವಾಟಿನಲ್ಲಿ ಏರಿಕೆಯಾಗಿದೆ.
10 ಗ್ರಾಂ ಚಿನ್ನದ ದರವು (ಶೇ 99.9 ಪರಿಶುದ್ಧತೆ) ₹400 ಏರಿಕೆಯಾಗಿದ್ದು, ₹77,450 ಆಗಿದೆ. ಸ್ಟ್ಯಾಂಡರ್ಡ್ ಚಿನ್ನದ (ಶೇ 99.5 ಶುದ್ಧತೆ) ದರವು 10 ಗ್ರಾಂಗೆ ಇಷ್ಟೇ ಪ್ರಮಾಣದಲ್ಲಿ ಹೆಚ್ಚಳವಾಗಿ, ₹77,050 ಆಗಿದೆ.
ಬೆಳ್ಳಿ ದರವು ಕೆ.ಜಿಗೆ ₹1,810 ಏರಿಕೆಯಾಗಿದ್ದು, ₹92 ಸಾವಿರದಂತೆ ಮಾರಾಟವಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.