ADVERTISEMENT

ಬೆಂಗಳೂರಿನಲ್ಲಿ ₹74 ಸಾವಿರ ದಾಟಿದ ಚಿನ್ನದ ದರ

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಬುಧವಾರ ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ₹74,060ಕ್ಕೆ ಮುಟ್ಟಿದೆ. ಒಂದು ಕೆ.ಜಿ ಬೆಳ್ಳಿ ದರ ₹84,600ಕ್ಕೆ ತಲುಪಿದೆ.

ಪಿಟಿಐ
Published 10 ಏಪ್ರಿಲ್ 2024, 15:50 IST
Last Updated 10 ಏಪ್ರಿಲ್ 2024, 15:50 IST
ಚಿನ್ನದ ದರ
ಚಿನ್ನದ ದರ   

ನವದೆಹಲಿ: ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಬುಧವಾರ ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ₹74,060ಕ್ಕೆ ಮುಟ್ಟಿದೆ. ಒಂದು ಕೆ.ಜಿ ಬೆಳ್ಳಿ ದರ ₹84,600ಕ್ಕೆ ತಲುಪಿದೆ. 

ನವದೆಹಲಿಯ ಚಿನಿವಾರ ಪೇಟೆಯಲ್ಲಿ ಸತತ ಮೂರನೇ ದಿನವೂ ಚಿನ್ನ ಮತ್ತು ಬೆಳ್ಳಿ ದರ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ₹160 ಏರಿಕೆಯಾಗಿ, ₹72 ಸಾವಿರದಂತೆ ಮಾರಾಟವಾಯಿತು. ಬೆಳ್ಳಿಯು ಒಂದು ಕೆ.ಜಿಗೆ ₹200 ಹೆಚ್ಚಳವಾಗಿ, ₹84,700ಕ್ಕೆ ಮುಟ್ಟಿದೆ. 

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,356 ಡಾಲರ್‌ (ಅಂದಾಜು ₹1.96 ಲಕ್ಷ) ಮತ್ತು 27.80 (ಅಂದಾಜು ₹2,343) ಡಾಲರ್‌ನಂತೆ ಮಾರಾಟವಾಗಿದೆ.

ADVERTISEMENT

‘ಮಾರ್ಚ್‌ ತಿಂಗಳಿನಲ್ಲಿ ಅಮೆರಿಕದ ಚಿಲ್ಲರೆ ಹಣದುಬ್ಬರವು ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ. ಅಲ್ಲದೆ, ಕೇಂದ್ರೀಯ ಬ್ಯಾಂಕ್‌ ಆದ ಫೆಡರಲ್‌ ರಿಸರ್ವ್‌ ಬಡ್ಡಿದರ ಕಡಿತಕ್ಕೆ ವಿಳಂಬ ಧೋರಣೆ ತಳೆದಿದೆ. ಇಸ್ರೇಲ್‌–ಪ್ಯಾಲೆಸ್ಟೀನ್‌ ಬಿಕ್ಕಟ್ಟು ಚಿನ್ನ ಮತ್ತು ಬೆಳ್ಳಿ ದರ ಏರಿಕೆ ಮೇಲೆ ಪರಿಣಾಮ ಬೀರಿದೆ’ ಎಂದು ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್ ಸರ್ವಿಸಸ್‌ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ (ಸರಕು ಸಂಶೋಧನೆ) ನವನೀತ್ ದಮಾನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.