ADVERTISEMENT

ಬೆಳ್ಳಿ ದರ ಕೆ.ಜಿಗೆ ₹1,500 ಇಳಿಕೆ

ಪಿಟಿಐ
Published 31 ಅಕ್ಟೋಬರ್ 2024, 14:05 IST
Last Updated 31 ಅಕ್ಟೋಬರ್ 2024, 14:05 IST
<div class="paragraphs"><p>ಬೆಳ್ಳಿ(ಪ್ರಾತಿನಿಧಿಕ ಚಿತ್ರ)</p></div>

ಬೆಳ್ಳಿ(ಪ್ರಾತಿನಿಧಿಕ ಚಿತ್ರ)

   

ನವದೆಹಲಿ: ಸತತ ಐದು ದಿನದ ವಹಿವಾಟಿನಲ್ಲಿ ಗಳಿಕೆ ಕಂಡಿದ್ದ ಬೆಳ್ಳಿ ಧಾರಣೆಯು, ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಇಳಿಕೆಯಾಗಿದೆ.

ಬೆಳ್ಳಿ ದರ ಕೆ.ಜಿಗೆ ₹1,500 ಕಡಿಮೆಯಾಗಿ, ₹99,500ರಂತೆ ಮಾರಾಟವಾಗಿದೆ. ಚಿನ್ನದ ದರವು ಸ್ಥಿರವಾಗಿದ್ದು, 10 ಗ್ರಾಂಗೆ ₹82,400 ಆಗಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್‌ ತಿಳಿಸಿದೆ.

ADVERTISEMENT

‘ಶುಕ್ರವಾರ ಅಮೆರಿಕದ ಕಾರ್ಮಿಕ ಇಲಾಖೆಯಿಂದ ಉದ್ಯೋಗ ಕುರಿತ ಮಾಸಿಕ  ವರದಿ ಮತ್ತು ಐಎಸ್‌ಎಂ ಮ್ಯಾನುಫ್ಯಾಕ್ಚರಿಂಗ್‌ ಸೂಚ್ಯಂಕದ ವರದಿ ಬಿಡುಗಡೆಯಾಗಲಿದೆ. ಇದು ಅಲ್ಲಿನ ಕೇಂದ್ರೀಯ ಬ್ಯಾಂಕ್‌ ಆದ ಫೆಡರಲ್‌ ರಿಸರ್ವ್‌ನ ಹಣಕಾಸು ನೀತಿ ಸಮಿತಿ ಸಭೆಯ ನಿರ್ಣಯದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ, ಹಳದಿ ಲೋಹದ ಖರೀದಿ ಸ್ಥಿರವಾಗಿದೆ’ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.