ನವದೆಹಲಿ: ಗ್ರಾಹಕರಿಂದ ಖರೀದಿ ಹೆಚ್ಚಳದಿಂದಾಗಿ ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ಬೆಳ್ಳಿ ಧಾರಣೆಯಲ್ಲಿ ಏರಿಕೆಯಾಗಿದ್ದರೆ, ಚಿನ್ನದ ದರದಲ್ಲಿ ಇಳಿಕೆಯಾಗಿದೆ.
ಬೆಳ್ಳಿ ದರವು ಕೆ.ಜಿಗೆ ₹2 ಸಾವಿರ ಏರಿಕೆಯಾಗಿದ್ದು, ₹87 ಸಾವಿರದಂತೆ ಮಾರಾಟವಾಗಿದೆ. ಇದು ಎರಡು ವಾರದ ಗರಿಷ್ಠ ಏರಿಕೆಯಾಗಿದೆ. ಕಳೆದ ಮೂರು ವಹಿವಾಟಿನ ದಿನದಲ್ಲಿ ಬೆಳ್ಳಿ ಧಾರಣೆಯು ಕೆ.ಜಿಗೆ ₹3,200 ಹೆಚ್ಚಳವಾಗಿದೆ.
ಚಿನ್ನದ ದರವು 10 ಗ್ರಾಂಗೆ ₹250 ಕಡಿಮೆಯಾಗಿ, ₹74,350ಕ್ಕೆ ಇಳಿಕೆಯಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,547 ಡಾಲರ್ (ಅಂದಾಜು ₹2.13 ಲಕ್ಷ) ಮತ್ತು 29 ಡಾಲರ್‌ನಂತೆ (ಅಂದಾಜು ₹2,447) ಮಾರಾಟವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.