ನವದೆಹಲಿ/ ಬೆಂಗಳೂರು: ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನ ಮತ್ತು ಬೆಳ್ಳಿ ಧಾರಣೆ ಇಳಿಕೆಯಾಗಿದೆ.
ಚಿನ್ನದ ದರವು 10 ಗ್ರಾಂಗೆ ₹1,100 ಇಳಿಕೆಯಾಗಿ, ₹71,700ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹2,200 ಕಡಿಮೆಯಾಗಿ, ₹82 ಸಾವಿರ ಆಗಿದೆ.
ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ ಬೆಳ್ಳಿ ದರ ಕೆ.ಜಿಗೆ ₹4,200 ಕಡಿಮೆಯಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ಹೇಳಿದೆ.
ಆಭರಣಕಾರರು ಮತ್ತು ಚಿಲ್ಲರೆ ಖರೀದಿದಾರರಿಂದ ಬೇಡಿಕೆ ಕಡಿಮೆಯಾಗಿದ್ದರಿಂದ ಚಿನ್ನದ ದರ ಇಳಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರವು ₹71,480 ಮತ್ತು ಕೆ.ಜಿ ಬೆಳ್ಳಿ ಧಾರಣೆಯು ₹82,100 ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.