ADVERTISEMENT

ಚಿನ್ನದ ದರ: 2 ದಿನದಲ್ಲಿ ₹4,000 ಇಳಿಕೆ

ಪಿಟಿಐ
Published 24 ಜುಲೈ 2024, 15:54 IST
Last Updated 24 ಜುಲೈ 2024, 15:54 IST
   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆಯು ಬುಧವಾರವೂ ಇಳಿಕೆಯಾಗಿದೆ. 

10 ಗ್ರಾಂ ಚಿನ್ನಕ್ಕೆ ₹650 ಕಡಿಮೆಯಾಗಿ, ₹71,650ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕೆ.ಜಿ ಬೆಳ್ಳಿ ದರ ₹87,500 ಇದೆ. 

ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ಕಸ್ಟಮ್ಸ್‌ ಸುಂಕವನ್ನು ಶೇ 6ಕ್ಕೆ ಕಡಿತಗೊಳಿಸಲಾಗಿದೆ. ಚಿನ್ನದ ದರವು ಮಂಗಳವಾರದ ವಹಿವಾಟಿನಲ್ಲಿ 10 ಗ್ರಾಂಗೆ ₹3,350 ಕಡಿಮೆಯಾಗಿತ್ತು. ಎರಡು ದಿನಗಳ ವಹಿವಾಟಿನಲ್ಲಿ ₹4 ಸಾವಿರ ಕಡಿಮೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.