ADVERTISEMENT

ಉತ್ತಮ ಬೆಳವಣಿಗೆ ಬಜಾಜ್‌ ಆಟೊ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 18:01 IST
Last Updated 20 ಜೂನ್ 2020, 18:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:2019–20ನೇ ಹಣಕಾಸು ವರ್ಷದಲ್ಲಿ ವರಮಾನವು ₹ 20,919 ಕೋಟಿಗಳಿಗೆ ತಲುಪಿದ್ದು, ತೆರಿಗೆ ಪೂರ್ವ ಲಾಭವು ₹ 6,580 ಕೋಟಿಗಳಷ್ಟಾಗಿದೆ ಎಂದು ಬಜಾಜ್‌ ಆಟೊ ತಿಳಿಸಿದೆ.

2010–20ರ ಅವಧಿಯಲ್ಲಿ ವಾರ್ಷಿಕ ಬೆಳವಣಿಗೆ ದರ ಶೇ 10ರಷ್ಟು ಸಾಧಿಸಲಾಗಿದೆ.ಹಿಂದಿನ ಹಣಕಾಸು ವರ್ಷದಲ್ಲಿ ಕಂಪನಿಯು ಹಲವು ಮೈಲು ಗಲ್ಲುಗಳನ್ನು ಸಾಧಿಸಿದೆ. 2019ರ ಅಕ್ಟೋಬರ್‌ನಲ್ಲಿ ತನ್ನ ಐಕಾನಿಕ್‌ ಬ್ರ್ಯಾಂಡ್‌ ಆಗಿದ್ದ ಚೇತನ್‌ ಅನ್ನು ವಿದ್ಯುತ್‌ ಚಾಲಿತ ರೂಪದಲ್ಲಿ ಬಿಡುಗಡೆ ಮಾಡಿದ್ದು, 2020ರ ಜನವರಿಯಲ್ಲಿ ಬೆಂಗಳೂರು ಮತ್ತು ಪುಣೆಯಲ್ಲಿ ಬುಕಿಂಗ್‌ ಆರಂಭಿಸಿ, ಮಾ‌ರ್ಚ್‌ನಲ್ಲಿ ಗ್ರಾಹಕರಿಗೆ ವಿತರಿಸಲಾಗಿದೆ.

‘ಸದ್ಯದ ಅನಿಶ್ಚಿತ ಪರಿಸ್ಥಿತಿಯ ಸಂದರ್ಭದಲ್ಲಿಯೂ ಜಾಗತಿಕ ನಾಯಕನಾಗಿ ಬೆಳೆಯುವ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಆತ್ಮವಿಶ್ವಾಸ ಹೊಂದಿದ್ದೇವೆ’ ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್‌ ಶರ್ಮಾ ಹೇಳಿದ್ದಾರೆ.

ADVERTISEMENT

12 ತಿಂಗಳಿನಲ್ಲಿ ಪ್ಲಾಟಿನಾ ಎಚ್‌–ಗಿಯರ್‌ ಮತ್ತು ಸಿಟಿ 110 ಮಾದರಿ ಗಳನ್ನು ಬಿಡುಗಡೆ ಮಾಡಲಾಗಿದ್ದು, ನಗರಗಳಲ್ಲಿಯೂ ವಹಿವಾಟು ಹೆಚ್ಚಿಸಿಕೊಳ್ಳಲು ಗಮನ ನೀಡಲಾಗಿದೆ ಎಂದೂ ಹೇಳಿದ್ದಾರೆ.ದೇಶದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ರಫ್ತು ವಹಿವಾಟಿನಲ್ಲಿ ಶೇ 50ರಷ್ಟು ಪಾಲನ್ನು ಬಜಾಜ್‌ ಆಟೊ ಕಂಪನಿಯೇ ಹೊಂದಿದೆ. ಹಿಂದಿನ ಹಣಕಾಸು ವರ್ಷದಲ್ಲಿ ತಯಾರಾಗಿದ್ದ ಒಟ್ಟಾರೆ ವಾಹನಗಳಲ್ಲಿ ಶೇ 47ರಷ್ಟು ರಫ್ತಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.