ADVERTISEMENT

ಗೂಗಲ್: ಜಾಹೀರಾತು ಮಾರಾಟ ವಿಭಾಗದ ನೂರಾರು ಉದ್ಯೋಗಿಗಳು ವಜಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜನವರಿ 2024, 2:33 IST
Last Updated 17 ಜನವರಿ 2024, 2:33 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

- ರಾಯಿಟರ್ಸ್ ಚಿತ್ರ

ಬೆಂಗಳೂರು: ಗೂಗಲ್‌ನ ‘ಜಾಬ್‌ ಕಟ್’ ಪ್ರಕ್ರಿಯೆ ಮುಂದುವರಿದಿದ್ದು, ಜಾಹೀರಾತು ಮಾರಾಟ ವಿಭಾಗದಿಂದ (advertising sales team) ನೂರಾರು ಉದ್ಯೋಗಿಗಳನ್ನು ವಜಾ ಮಾಡುತ್ತಿರುವುದಾಗಿ ಮಂಗಳವಾರ ಹೇಳಿದೆ.

ADVERTISEMENT

ಪುನರ್‌ರಚನಾ ಅಂಗವಾಗಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಗೂಗಲ್‌ನ ಚೀಫ್‌ ಬ್ಯುಸಿನೆಸ್‌ ಆಫೀಸರ್ ಫಿಲಿಪ್ ಶಿಂಡ್ಲರ್ ಅವರು ಉದ್ಯೋಗಿಗಳಿಗೆ ಕಳುಹಿಸಿದ ಮೆಮೊದಲ್ಲಿ ತಿಳಿಸಿದ್ದಾರೆ ಎಂದು ‘ಬ್ಯುಸಿನೆಸ್‌ ಇನ್‌ಸೈಡರ್‌’ ವರದಿ ಮಾಡಿದೆ.

ಹಾರ್ಡ್‌ವೇರ್, ಸೆಂಟ್ರಲ್ ಎಂಜಿನಿಯರಿಂಗ್‌ ಹಾಗೂ ಗೂಗಲ್‌ ಅಸಿಸ್ಟೆಂಟ್‌ ತಂಡದಿಂದ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಹೇಳಿದ ಕೆಲವೇ ದಿನಗಳಲ್ಲಿ ಈ ಘೋಷಣೆ ಹೊರಬಿದ್ದಿದೆ.

ಕೃತಕ ಬುದ್ಧಿಮತ್ತೆ ಸಾಫ್ಟ್‌ವೇರ್‌ ಹಾಗೂ ಕೆಲಸದ ಹೊರೆಗಳನ್ನು ಕಡಿಮೆಗೊಳಿಸಲು ಸ್ವಯಂಚಾಲಿತ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಕಂಪನಿ ಮುಂದಾಗಿದ್ದು, ಕೆಲಸದಿಂದ ನೌಕರರು ವಜಾ ಮಾಡುವ ಈ ಪ್ರಕ್ರಿಯೆ ಮುಂದುವರಿಯುವ ಸಾಧ್ಯತೆ ಇದೆ.

ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಿಗೆ ಬೆಂಬಲ ನೀಡುವ ಸಲುವಾಗಿ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂದು ಗೂಗಲ್ ಹೇಳಿದೆ. ಈ ಬದಲಾವಣೆಯಿಂದಾಗಿ ಕಂಪನಿಯು ಹೆಚ್ಚಿನ ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಅಲ್ಲದೆ ‘ಸಪೋರ್ಟ್‌ ಟೀಂ’ನ ನೇಮಕಾತಿ ಈ ವರ್ಷ ಹೆಚ್ಚಾಗುವ ಸಂಭವವಿದೆ.

ಜಾಗತಿಕವಾಗಿ 12,000 ಮಂದಿಯನ್ನು ಉದ್ಯೋಗದಿಂದ ಕಿತ್ತು ಹಾಕುವುದಾಗಿ ಕಳೆದ ವರ್ಷ ಜನವರಿಯಲ್ಲಿ ಗೂಗಲ್ ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.