ADVERTISEMENT

ಎಫ್‌ಕೆಸಿಸಿಐ ಅಧ್ಯಕ್ಷರಾಗಿ ರೆಡ್ಡಿ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 15:49 IST
Last Updated 2 ಅಕ್ಟೋಬರ್ 2022, 15:49 IST
ರಮೇಶ್‌ ಚಂದ್ರ ಲಹೋಟಿ
ರಮೇಶ್‌ ಚಂದ್ರ ಲಹೋಟಿ   

ಬೆಂಗಳೂರು: ಉದ್ಯಮಿ ಬಿ.ವಿ. ಗೋಪಾಲ ರೆಡ್ಡಿ ಅವರು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಪ್‌ಕೆಸಿಸಿಐ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರೆಡ್ಡಿ ಅವರ ಬೆಂಗಳೂರಿನ ಮಾರ್ಷಲ್ ಮೋಟರ್ಸ್ ಪ್ರೈ.ಲಿ. ಕಂಪನಿಯ ಅಧ್ಯಕ್ಷ.

ರೆಡ್ಡಿ ಅವರು ಎಫ್‌ಕೆಸಿಸಿಐ ಜೊತೆ ಎರಡು ದಶಕಗಳಿಗೂ ಹೆಚ್ಚಿನ ಅವಧಿಯಿಂದ ಗುರುತಿಸಿಕೊಂಡಿದ್ದಾರೆ. ಹಿಂದೆ ಎಫ್‌ಕೆಸಿಸಿಐ ಉಪಾಧ್ಯಕ್ಷರಾಗಿ, ಹಿರಿಯ ಉಪಾಧ್ಯಕ್ಷರಾಗಿ ಅವರು ಕರ್ತವ್ಯ ನಿಭಾಯಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ರಮೇಶ್‌ ಚಂದ್ರ ಲಹೋಟಿ ಅವರು ಎಫ್‌ಕೆಸಿಸಿಐ ಹಿರಿಯ ಉಪಾಧ್ಯಕ್ಷರಾಗಿ, ಎಂ.ಜಿ. ಬಾಲಕೃಷ್ಣ ಅವರು ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.