ನವದೆಹಲಿ:2017–18ನೇ ಹಣಕಾಸು ವರ್ಷದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರವನ್ನು ಕೇಂದ್ರ ಸರ್ಕಾರ ಗುರುವಾರ ಪರಿಷ್ಕರಿಸಿ, ಶೇ 6.7ರಿಂದ 7.2ಕ್ಕೆ ಏರಿಕೆ ಮಾಡಿದೆ.
2011–12ರ ಸ್ಥಿರ ಬೆಲೆ ಆಧರಿಸಿದ 2017–18 ಮತ್ತು 2016–17ನೇ ಹಣಕಾಸು ವರ್ಷಗಳ ನೈಜ ಜಿಡಿಪಿ ಬೆಳವಣಿಗೆ ದರವು, ಕ್ರಮವಾಗಿ ₹131.80 ಲಕ್ಷ ಕೋಟಿ ಹಾಗೂ ₹122.98 ಲಕ್ಷ ಕೋಟಿ ಆಗಿದೆ. ಹೀಗಾಗಿ ಈ ಎರಡೂ ಹಣಕಾಸು ವರ್ಷಗಳಲ್ಲಿನ ವೃದ್ಧಿ ದರವು ಕ್ರಮವಾಗಿ ಶೇ 7.2 ಹಾಗೂ ಶೇ 8.2ರಷ್ಟು ದಾಖಲಾಗಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ (ಸಿಎಸ್‌ಒ) ತಿಳಿಸಿದೆ.
ಈ ಹಿಂದೆ ಕೇಂದ್ರ ಸಾಂಖ್ಯಿಕ ಕಚೇರಿಯು 2018–19ನೇ ಸಾಲಿನ ಜಿಡಿಪಿ ಬೆಳವಣಿಗೆ ದರವು ಶೇ 7.2ರಷ್ಟು ಇರಲಿದೆ ಎಂದು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.