ನವದೆಹಲಿ:ಚಾಲನಾ ಅನುಮತಿ ಪತ್ರ (ಡಿಎಲ್), ಹೊಸ ವಾಹನಗಳ ನೋಂದಣಿ ಮತ್ತು ದೋಷಪೂರಿತ ವಾಹನಗಳನ್ನು ಹಿಂದೆ ಪಡೆಯುವುದಕ್ಕೆ ಸಂಬಂಧಿಸಿದ ಮೋಟರ್ ವಾಹನ ನಿಯಮಗಳ ತಿದ್ದುಪಡಿ ಕುರಿತು ಸರ್ಕಾರ ಸಾರ್ವಜನಿಕರಿಂದ ಸಲಹೆಗಳನ್ನು ಮರು ಆಹ್ವಾನಿಸಿದೆ.
ಮೋಟರ್ ವಾಹನ ಉದ್ದಿಮೆಯ ಎಲ್ಲ ಭಾಗಿದಾರರು ಮತ್ತು ಸಾರ್ವಜನಿಕರಿಂದ ಸಲಹೆ ಆಹ್ವಾನಿಸಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ. ಇದಕ್ಕೂ ಮೊದಲು ಈ ವರ್ಷದ ಮಾರ್ಚ್ 18ರಂದು ಸಾರ್ವಜನಿಕರ ಅಭಿಪ್ರಾಯ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಮೇ 29ಕ್ಕೆ ಮತ್ತೆ ಅಧಿಸೂಚನೆ ಹೊರಡಿಸಲಾಗಿದೆ.
ಲಾಕ್‌ಡೌನ್ ಕಾರಣಕ್ಕೆ ಸಲಹೆ – ಸೂಚನೆಗಳನ್ನು ನೀಡಲು ಈಗ ಮತ್ತೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಅಧಿಸೂಚನೆ ಹೊರಡಿಸಿದ 60 ದಿನಗಳಲ್ಲಿ ಸಲಹೆಗಳನ್ನು ನೀಡಬೇಕಾಗಿದೆ. ಈ ಮೊದಲು ಸಲಹೆ ನೀಡಿದವರು ಮತ್ತೆ ಅವುಗಳನ್ನು ನೀಡುವ ಅಗತ್ಯ ಇಲ್ಲ.
ವಾಹನಗಳ ಸಂಖ್ಯೆ ಮತ್ತು ವಾಹನದ ಮಾದರಿ ಆಧರಿಸಿ ದೋಷಪೂರಿತ ವಾಹನಗಳಿಗೆ ₹ 10 ಲಕ್ಷದಿಂದ ₹ 1 ಕೋಟಿವರೆಗೆ ದಂಡ ವಿಧಿಸಲು ಸರ್ಕಾರ ಉದ್ದೇಶಿಸಿದೆ.
ಎಲೆಕ್ಟ್ರಾನಿಕ್ ಅರ್ಜಿ, ವೈದ್ಯಕೀಯ ಪ್ರಮಾಣಪತ್ರ, ಲರ್ನರ್ಸ್ ಲೈಸೆನ್ಸ್ ಮತ್ತಿತರ ಮಹತ್ವದ ಸಂಗತಿಗಳನ್ನು ಕರಡು ಅಧಿಸೂಚನೆ ಒಳಗೊಂಡಿದೆ.
ಅಧಿಸೂಚನೆಯ ವಿವರಗಳನ್ನು www.morth.gov.in ತಾಣದಲ್ಲಿ ವೀಕ್ಷಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.