ನವದೆಹಲಿ: ಖರೀದಿ ಮಾಡಿದ ಸಂದರ್ಭದಲ್ಲಿ ಬಿಲ್ ಕೊಡುವಾಗ ಮಳಿಗೆಗಳಲ್ಲಿ ಗ್ರಾಹಕರ ಮೊಬೈಲ್ ಸಂಖ್ಯೆ ನೋಂದಣಿ ಮಾಡಿಕೊಳ್ಳುವುದು ಅಕ್ರಮ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ (ಡಿಸಿಎ) ಹೇಳಿದೆ.
ಇದಕ್ಕೆ ಸಂಬಂಧಿಸಿದಂತೆ ಮಂಗಳವಾರ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಸುತ್ತೋಲೆ ಹೊರಡಿಸಿದ್ದಾರೆ.
ಸೇವೆ ಅಥವಾ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಿದಾಗ ಬಿಲ್ ಕೊಡುವ ಸಂದರ್ಭದಲ್ಲಿ ಗ್ರಾಹಕರ ವೈಯಕ್ತಿಕ ಮೊಬೈಲ್ ನಂಬರ್ ಅನ್ನು ನಮೂದಿಸಿಕೊಳ್ಳುವ ಹಾಗಿಲ್ಲ ಎಂದು ರಿಟೇಲರ್‌ಗಳಿಗೆ ಆದೇಶ ನೀಡಲಾಗಿದೆ.
‘ರಿಟೇಲ್ ಮಳಿಗೆಯಲ್ಲಿ ಮೊಬೈಲ್ ನಂಬರ್ ಕೊಡದೇ ಬಿಲ್ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ’ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕೆ ಅನೇಕ ಗ್ರಾಹಕರು ದೂರು ನೀಡಿದ್ದರು.
ಗ್ರಾಹಕರ ಫೋನ್ ನಂಬರ್‌ಗಳನ್ನು ಒತ್ತಾಯಪೂರ್ವಕವಾಗಿ ಸಂಗ್ರಹಿಸುವುದು ತರವಲ್ಲ. ಇದು ಕಡ್ಡಾಯವಲ್ಲ, ಇದು ಉತ್ತಮ ವ್ಯಾಪಾರದ ಲಕ್ಷಣವಲ್ಲ. ಗ್ರಾಹಕ ವ್ಯವಹಾರಗಳ ಕಾಯ್ದೆ ಪ್ರಕಾರ ಇದು ತಪ್ಪು ಎಂದು ರೋಹಿತ್ ಕುಮಾರ್ ಹೇಳಿದ್ದಾರೆ.
ಇದು ಗ್ರಾಹಕರ ಖಾಸಗಿತನದ ರಕ್ಷಣೆಯನ್ನು ಒಳಗೊಂಡಿದ್ದು ಈ ಕುರಿತು ಸಿಐಐ ಹಾಗೂ ಎಫ್‌ಐಸಿಸಿಐಗಳಿಗೆ ಸುತ್ತೋಲೆ ಕಳಿಸಿಕೊಡಲಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.