ADVERTISEMENT

ಆಕಸ್ಮಿಕ ಲಾಭ ತೆರಿಗೆ ತಗ್ಗಿಸಿದ ಕೇಂದ್ರ

ಪಿಟಿಐ
Published 18 ಅಕ್ಟೋಬರ್ 2023, 13:49 IST
Last Updated 18 ಅಕ್ಟೋಬರ್ 2023, 13:49 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರವು ಬುಧವಾರದಿಂದ ಜಾರಿಗೆ ಬರುವಂತೆ ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆ ತಗ್ಗಿಸಿದೆ. ಇದೇ ವೇಳೆ, ಡೀಸೆಲ್‌ ಮತ್ತು ವಿಮಾನ ಇಂಧನದ ಮೇಲಿನ ತೆರಿಗೆಯನ್ನು ಸಹ ಇಳಿಕೆ ಮಾಡಿದೆ.

ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆಯು ಪ್ರತಿ ಟನ್‌ಗೆ ₹12,100 ಇದ್ದಿದ್ದು ₹9,050ಕ್ಕೆ ಇಳಿಕೆ ಆಗಿದೆ. 

ಡೀಸೆಲ್‌ ಮೇಲಿನ ರಫ್ತು ತೆರಿಗೆಯನ್ನು ಪ್ರತಿ ಲೀಟರಿಗೆ ₹5 ರಿಂದ ₹4ಕ್ಕೆ ಇಳಿಕೆ ಮಾಡಲಾಗಿದೆ. ಅದೇ ರೀತಿ, ವಿಮಾನ ಇಂಧನದ (ಎಟಿಎಫ್‌) ಮೇಲಿನ ತೆರಿಗೆಯನ್ನು ಪ್ರತಿ ಲೀಟರಿಗೆ ₹2.5 ರಿಂದ ₹1ಕ್ಕೆ ತಗ್ಗಿಸಲಾಗಿದೆ.

ADVERTISEMENT

ಪೆಟ್ರೋಲ್‌ ಮೇಲಿನ ಶೂನ್ಯ ತೆರಿಗೆಯನ್ನು ಮುಂದುವರಿಸಲಾಗಿದೆ. 2022ರ ಜುಲೈ 1ರಿಂದ ಆಕಸ್ಮಿಕ ಲಾಭ ತೆರಿಗೆ ವಿಧಿಸುವುದನ್ನು ಆರಂಭಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.