ADVERTISEMENT

ಲ್ಯಾಪ್‌ಟಾಪ್‌ ಆಮದು ನಿರ್ಬಂಧ ಜಾರಿ ಮುಂದೂಡಿಕೆ

ಪಿಟಿಐ
Published 5 ಆಗಸ್ಟ್ 2023, 16:16 IST
Last Updated 5 ಆಗಸ್ಟ್ 2023, 16:16 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಲ್ಯಾಪ್‌ಟಾಪ್‌, ಟ್ಯಾಬ್‌ ಮತ್ತು ಪರ್ಸನಲ್‌ ಕಂಪ್ಯೂಟರ್‌ಗಳ ಆಮದು ಮೇಲಿನ ನಿರ್ಬಂಧ ಜಾರಿಗೊಳಿಸುವುದನ್ನು ಅಕ್ಟೋಬರ್ 31ರವರೆಗೆ ಮುಂದೂಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಇದರಿಂದಾಗಿ ಕಂಪನಿಗಳು ಪರವಾನಗಿ ಇಲ್ಲದೇ ಆಮದು ಮಾಡಿಕೊಳ್ಳಲು ಹೆಚ್ಚಿನ ಸಮಯ ದೊರೆತಂತಾಗಿದೆ.

ನವೆಂಬರ್‌ 1ರಿಂದ ಈ ಸಾಧನಗಳನ್ನು ಆಮದು ಮಾಡಿಕೊಳ್ಳಲು ಕಂಪನಿಗಳು ಸರ್ಕಾರದಿಂದ ಪರವಾನಗಿ ಪಡೆದುಕೊಂಡಿರಬೇಕು.

ವಿದೇಶಿ ವ್ಯಾಪಾರಗಳ ಮಹಾನಿರ್ದೇಶನಾಲಯವು (ಡಿಜಿಎಫ್‌ಟಿ) ಶುಕ್ರವಾರ ತಡರಾತ್ರಿ ಹೊರಡಿಸಿರುವ ಆದೇಶದ ಪ್ರಕಾರ, ನಿರ್ಬಂಧವು ನವೆಂಬರ್ 1ರಿಂದ ಜಾರಿಗೆ ಬರಲಿದೆ. ಲೈಸೆನ್ಸ್ ಇಲ್ಲದೇ ಅಕ್ಟೋಬರ್ 31ರವರೆಗೆ ಆಮದು ಮಾಡಿಕೊಳ್ಳಬಹುದು. ನವೆಂಬರ್ 1 ರಿಂದ ಲೈಸೆನ್ಸ್‌ ಅಗತ್ಯ ಎಂದು ತಿಳಿಸಿದೆ.

ADVERTISEMENT

ಕೇಂದ್ರ ಸರ್ಕಾರವು ಆಗಸ್ಟ್‌ 3ರಂದು ಈ ಸಾಧನಗಳ ಆಮದು ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧ ಹೇರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.