ADVERTISEMENT

ಜಿಇಎಂ ಪೋರ್ಟಲ್‌ನಲ್ಲಿ 8 ಸಾವಿರ ತಳಿಗಳ ಬಿತ್ತನೆ ಬೀಜ ಲಭ್ಯ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 16:11 IST
Last Updated 4 ನವೆಂಬರ್ 2024, 16:11 IST
ಜಿಇಎಂ
ಜಿಇಎಂ   

ನವದೆಹಲಿ: ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ಸಿಗುವಂತೆ ಮಾಡುವ ಉದ್ದೇಶದಿಂದ 8 ಸಾವಿರ ತಳಿಗಳ ಬೀಜಗಳನ್ನು ಸರ್ಕಾರಿ ಇ-ಮಾರುಕಟ್ಟೆ (ಜಿಇಎಂ) ಪೋರ್ಟಲ್‌ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುವುದು. ಅದಕ್ಕಾಗಿ ಬಿತ್ತನೆ ಬೀಜಗಳನ್ನು 170 ವಿಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಜಿಇಎಂನ ಡೆಪ್ಯುಟಿ ಸಿಇಒ ರೋಲಿ ಖರೆ ಹೇಳಿದ್ದಾರೆ.

ಈ ಹೊಸ ವಿಭಾಗಗಳಲ್ಲಿ ಸಾವಿರಾರು ವಿಧದ ಬಿತ್ತನೆ ಬೀಜಗಳು ಲಭ್ಯವಿವೆ. ಇವುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ದೇಶದ ವಿವಿಧ ಭಾಗಗಳಿಂದ ಇತರೆ ಸರ್ಕಾರಿ ಸಂಸ್ಥೆಗಳು ಸಂಗ್ರಹಿಸುತ್ತವೆ.

ರಾಜ್ಯದ ಬೀಜ ನಿಗಮಗಳು ಮತ್ತು ಸಂಶೋಧನಾ ವಿಭಾಗಗಳು ಸೇರಿದಂತೆ ತಜ್ಞರೊಂದಿಗೆ ಸಮಾಲೋಚಿಸಿದ ನಂತರ, ಬೀಜ ಸಂಗ್ರಹಣೆಗೆ ನಿಯಮಗಳನ್ನು ರೂಪಿಸಲಾಗಿದೆ. ಅದರ ಭಾಗವಾಗಿ ಹೊಸ ಇಲಾಖೆಗಳನ್ನು ರಚಿಸಲಾಗಿದೆ. ಕೇಂದ್ರ ಸರ್ಕಾರವು ನಿಗದಿಪಡಿಸಿದ ನಿಯಮಗಳು ಮತ್ತು ನಿಬಂಧನೆಗಳು ಬೀಜ ಸಂಗ್ರಹಣೆಯ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ ಎಂದು ಹೇಳಿದ್ದಾರೆ.

ADVERTISEMENT

ಸರ್ಕಾರದ ಟೆಂಡರ್‌ಗಳಲ್ಲಿ ಮುಕ್ತವಾಗಿ ಭಾಗವಹಿಸಲು ಮತ್ತು ಬಿತ್ತನೆ ಬೀಜಗಳನ್ನು ಪೂರೈಸಲು ಮಾರಾಟಗಾರರನ್ನು ಆಹ್ವಾನಿಸುತ್ತೇವೆ. ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಬೀಜಗಳನ್ನು ಖರೀದಿಸಲು ಈ ಹೊಸ ವರ್ಗಗಳ ಅನುಕೂಲವನ್ನು ಬಳಸಿಕೊಳ್ಳಲು ಬೀಜ ಕಂಪನಿಗಳು ಮತ್ತು ರಾಜ್ಯ ಇಲಾಖೆಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.