ADVERTISEMENT

ಕುಚ್ಚಿಲಕ್ಕಿ ರಫ್ತು ಸುಂಕ ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2023, 12:36 IST
Last Updated 14 ಅಕ್ಟೋಬರ್ 2023, 12:36 IST
<div class="paragraphs"><p> ಅಕ್ಕಿ ರಫ್ತು </p></div>

ಅಕ್ಕಿ ರಫ್ತು

   

ನವದೆಹಲಿ (ಪಿಟಿಐ): ಕುಚ್ಚಿಲಕ್ಕಿ ರಫ್ತು ಮೇಲೆ ವಿಧಿಸಿರುವ ಶೇ 20ರಷ್ಟು ಸುಂಕವು 2024ರ ಮಾರ್ಚ್‌ 31ರವರೆಗೂ ಜಾರಿಯಲ್ಲಿ ಇರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ದೇಶದಲ್ಲಿ ಪೂರೈಕೆ ವ್ಯವಸ್ಥೆ ಸುಧಾರಿಸಲು ಮತ್ತು ಬೆಲೆ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮೊದಲಿಗೆ ಆಗಸ್ಟ್‌ 25ರಿಂದ ಅಕ್ಟೋಬರ್ 16ರವರೆಗೆ ರಫ್ತು ಸುಂಕ ವಿಧಿಸಿತ್ತು. ಇದೀಗ ಮುಂದಿನ ವರ್ಷದ ಮಾರ್ಚ್‌ ಅಂತ್ಯದವರೆಗೂ ವಿಸ್ತರಣೆ ಮಾಡಿರುವುದಾಗಿ ಹಣಕಾಸು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ದೇಶವು ರಫ್ತು ಮಾಡುತ್ತಿರುವ ಅಕ್ಕಿಯಲ್ಲಿ ಬಾಸ್ಮತಿ ಹೊರತುಪಡಿಸಿ ಇತರ ಬಗೆಯ ಅಕ್ಕಿ ಪಾಲು ಶೇ 25ರಷ್ಟು ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.