ನವದೆಹಲಿ: ಲಾಕ್‌ಡೌನ್ ಇರುವುದರಿಂದಕೇಂದ್ರ ಸರ್ಕಾರವು ಮೂರನೇ ಬಾರಿಗೆ ಇ–ವೇ ಬಿಲ್‌ಗಳ ಸಿಂಧುತ್ವ ಅವಧಿಯನ್ನು ವಿಸ್ತರಿಸಿದೆ.
ಮಾರ್ಚ್ 24ರಂದು ಅಥವಾ ಅದಕ್ಕಿಂತಲೂ ಮುಂಚೆ ಸೃಷ್ಟಿಸಿರುವ ಇ–ವೇ ಬಿಲ್‌ಗಳ ಸಿಂಧುತ್ವ ಅವಧಿಯು ಜೂನ್ 30ರವರೆಗೆ ವಿಸ್ತರಣೆಯಾಗಲಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಐಸಿ) ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆ ಮಾರ್ಚ್ 20 ಮತ್ತು ಏಪ್ರಿಲ್ 15ಕ್ಕೆ ಅಂತ್ಯವಾಗುತ್ತಿದ್ದ ಇ–ವೇ ಬಿಲ್‌ಗಳ ಅವಧಿಯನ್ನು ಏಪ್ರಿಲ್ 30ರವರೆಗೆ, ನಂತರ ಮೇ 31ರವರೆಗೂ ವಿಸ್ತರಣೆ ಮಾಡಲಾಗಿತ್ತು.
₹50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸರಕುಗಳನ್ನು ರಾಜ್ಯದ ಒಳಗೆ ಮತ್ತು ಬೇರೆ ರಾಜ್ಯಗಳಿಗೆ ಸಾಗಿಸಲು ಇ–ವೇ ಬಿಲ್ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.ಇ–ವೇ ಬಿಲ್‌ಗಳ ಸಿಂಧುತ್ವವು ವಹಿವಾಟುದಾರರು ನಮೂದಿಸುವ ಅಂತರವನ್ನು ಅವಲಂಬಿಸಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.