ನವದೆಹಲಿ (ಪಿಟಿಐ): ಸಾಲದ ಸುಳಿಯಲ್ಲಿ ಸಿಲುಕಿರುವ ದೂರಸಂಪರ್ಕ ಸೇವಾ ಕಂಪನಿ ವೊಡಾಫೋನ್ ಐಡಿಯಾದ ಆಡಳಿತ ಮಂಡಳಿಯು ₹ 16,133 ಕೋಟಿ ಮೌಲ್ಯದ ಈಕ್ವಿಟಿ ಷೇರುಗಳನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲು ಒಪ್ಪಿಗೆ ನೀಡಿದೆ. ಇಷ್ಟು ಮೌಲ್ಯದ ಷೇರುಗಳನ್ನು ವರ್ಗಾವಣೆ ಮಾಡಿದ ನಂತರದಲ್ಲಿ ಕಂಪನಿಯಲ್ಲಿ ಕೇಂದ್ರ ಸರ್ಕಾರದ ಪಾಲು ಶೇಕಡ 33.44 ಆಗಲಿದೆ.
ಹೊಂದಾಣಿಕೆ ಮಾಡಿದ ಒಟ್ಟು ವರಮಾನ ಪಾವತಿಯನ್ನು ಮುಂದಕ್ಕೆ ಹಾಕಿದ್ದರಿಂದ ಪಾವತಿ ಮಾಡಬೇಕಿರುವ ಬಾಕಿ ಬಡ್ಡಿ ಹಾಗೂ ತರಂಗಾಂತರ ಹರಾಜು ಪಾವತಿಗಳ ಬಾಕಿ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ಈಕ್ವಿಟಿ ಷೇರುಗಳ ರೂಪದಲ್ಲಿ ನಿಡಲಾಗುತ್ತಿದೆ ಎಂದು ಕಂಪನಿಯು ಷೇರುಪೇಟೆಗೆ ಮಂಗಳವಾರ ತಿಳಿಸಿದೆ.
ಕಂಪನಿಯನ್ನು ಮುನ್ನಡೆಸುವ ಹಾಗೂ ಅಗತ್ಯ ಬಂಡವಾಳವನ್ನು ತರುವ ಖಚಿತ ಭರವಸೆಯು ಆದಿತ್ಯ ಬಿರ್ಲಾ ಸಮೂಹದ ಕಡೆಯಿಂದ ದೊರೆತ ನಂತರದಲ್ಲಿ ಕೇಂದ್ರ ಸರ್ಕಾರವು ತನಗೆ ಬರಬೇಕಿರುವ ಬಾಕಿ ಮೊತ್ತವನ್ನು ಈಕ್ವಿಟಿ ಷೇರುಗಳ ರೂಪದಲ್ಲಿ ಪಾವತಿ ಮಾಡುವುದಕ್ಕೆ ಒಪ್ಪಿಗೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.