ನವದೆಹಲಿ: ಐಡಿಬಿಐ ಬ್ಯಾಂಕ್‌ನ ಶೇ 60.72ರಷ್ಟು ಷೇರುಗಳನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿ ಹಲವು ಹೂಡಿಕೆದಾರರು ಪ್ರಾಥಮಿಕ ಬಿಡ್ ಸಲ್ಲಿಸಿದ್ದಾರೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ್ ಪಾಂಡೆ ಟ್ವೀಟ್ ಮಾಡಿದ್ದಾರೆ.
ಸದ್ಯ, ಕೇಂದ್ರ ಸರ್ಕಾರ ಮತ್ತು ಎಲ್‌ಐಸಿ ಒಟ್ಟಾರೆ ಶೇ 94.72ರಷ್ಟು ಷೇರುಪಾಲನ್ನು ಐಡಿಬಿಐ ಬ್ಯಾಂಕ್‌ನಲ್ಲಿ ಹೊಂದಿವೆ. ಇದರಲ್ಲಿ ಶೇ 60.72ರಷ್ಟು ಷೇರುಪಾಲನ್ನು ಬ್ಯಾಂಕ್‌ನ ಆಡಳಿತದ ನಿಯಂತ್ರದ ಜೊತೆಗೆ ಮಾರಾಟ ಮಾಡಲು ಅಕ್ಟೋಬರ್‌ನಲ್ಲಿ ಬಿಡ್ ಆಹ್ವಾನಿಸಲಾಗಿತ್ತು. ಪ್ರಾಥಮಿಕ ಬಿಡ್ ಸಲ್ಲಿಸಲು ಡಿಸೆಂಬರ್ 16 ಕಡೆಯ ದಿನವಾಗಿತ್ತು. ಆದರೆ, ನಂತರ ಅದನ್ನು 2023ರ ಜನವರಿ 7ರವರೆಗೆ ವಿಸ್ತರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.