ನವದೆಹಲಿ (ಪಿಟಿಐ): ತೆಂಗಿನ ಎಣ್ಣೆ ಉತ್ಪಾದನೆಗೆ ಬಳಸುವ ಕೊಬ್ಬರಿಯ (ಮಿಲ್ಲಿಂಗ್ ಕೊಪ್ರಾ) ಮತ್ತು ತಿನ್ನುವ ಕೊಬ್ಬರಿಯ (ಬಾಲ್ ಕೊಪ್ರಾ) ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕೇಂದ್ರ ಸರ್ಕಾರವು ಕ್ರಮವಾಗಿ ಕ್ವಿಂಟಲ್‌ಗೆ ₹ 270ರಷ್ಟು ಮತ್ತು ₹ 750ರಷ್ಟು ಏರಿಕೆ ಮಾಡಿದೆ.
ಎಂಎಸ್‌ಪಿ ಹೆಚ್ಚಳದಿಂದಾಗಿ ಸಾಮಾನ್ಯ ಗುಣಮಟ್ಟದ (ಎಫ್ಎಕ್ಯು) ಮಿಲ್ಲಿಂಗ್ ಕೊಪ್ರಾದ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ ₹ 10,860ಕ್ಕೆ ಮತ್ತು ಬಾಲ್ ಕೊಪ್ರಾ ಬೆಲೆ ಕ್ವಿಂಟಲ್‌ಗೆ ₹11,750ಕ್ಕೆ ಏರಿಕೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಸತ್ ಸಮಿತಿಯು 2023ರ ಅವಧಿಗೆ ಈ ಎಂಎಸ್‌ಪಿಗೆ ಒಪ್ಪಿಗೆ ನೀಡಿದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರದ ಬೆಲೆ ಸಲಹಾ ಸಂಸ್ಥೆಯಾಗಿರುವ ಕೃಷಿ ವೆಚ್ಚ ಮತ್ತು ಬೆಲೆ ಆಯೋಗ (ಸಿಎಸಿಪಿ) ಹಾಗೂ ಕೊಬ್ಬರಿ ಬೆಳೆಯುವ ಪ್ರಮುಖ ರಾಜ್ಯಗಳ ಶಿಫಾರಸಿಗೆ ಅನುಗುಣವಾಗಿ ಈ ನಿರ್ಧಾರಕ್ಕೆ ಬರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.