ADVERTISEMENT

ಎಥೆನಾಲ್‌ ತಯಾರಿಕೆ: ಕಬ್ಬಿನ ಹಾಲು ಬಳಕೆಗೆ ಒಪ್ಪಿಗೆ

ಪಿಟಿಐ
Published 16 ಡಿಸೆಂಬರ್ 2023, 16:04 IST
Last Updated 16 ಡಿಸೆಂಬರ್ 2023, 16:04 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಎಥೆನಾಲ್‌ ತಯಾರಿಕೆಗೆ ಕಬ್ಬಿನ ಹಾಲು‌ ಹಾಗೂ ಮೊಲಾಸಿಸ್‌–ಬಿ (ಕಾಕಂಬಿ) ಬಳಕೆಗೆ ಅನುಮತಿ ನೀಡಿ ಕೇಂದ್ರ ಆಹಾರ ಸಚಿವಾಲಯವು ಪರಿಷ್ಕೃತ ಆದೇಶ ಹೊರಡಿಸಿದೆ.

ಅಲ್ಲದೇ, ಎಥೆನಾಲ್‌ ಉತ್ಪಾದನೆಯ ಉದ್ದೇಶಕ್ಕಾಗಿ ಸಕ್ಕರೆ ಬಳಕೆಯ ಮಿತಿಯನ್ನು 2023–24ನೇ ಸಾಲಿನ ಪೂರಕ ವರ್ಷದಲ್ಲಿ 17 ಟನ್‌ಗಳಿಗಷ್ಟೇ ಸೀಮಿತಗೊಳಿಸಿದೆ.

ADVERTISEMENT

ಎಥೆನಾಲ್‌ ಉತ್ಪಾದನೆಗೆ ಕಬ್ಬಿನ ಹಾಲು ಮತ್ತು ಕಾಕಂಬಿ ಬಳಕೆಗೆ ನಿಷೇಧ ಹೇರಿ ಹಿಂದಿನ ವಾರ ಕೇಂದ್ರ ಸರ್ಕಾರವು ಆದೇಶ ಹೊರಡಿಸಿತ್ತು. ಇದಕ್ಕೆ ಸಕ್ಕರೆ ಕಾರ್ಖಾನೆಗಳಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರವು ಪರಿಷ್ಕೃತ ಆದೇಶ ಹೊರಡಿಸಿದೆ. 

ಹಾಗಾಗಿ, 2023–24ನೇ ಸಾಲಿಗೆ ತೈಲ ಮಾರಾಟ ಸಂಸ್ಥೆಗಳು ಕಬ್ಬಿನ ಉಪ ಉತ್ಪನ್ನಗಳಿಂದ ತಯಾರಿಸಿದ ಎಥೆನಾಲ್‌ ಪೂರೈಕೆಗೆ ಸಂಬಂಧಿಸಿದಂತೆ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳಿಗೆ ಪರಿಷ್ಕೃತ ಬೇಡಿಕೆ ಸಲ್ಲಿಸಲಿವೆ ಎಂದು ಹೇಳಿದೆ. 

ಅಲ್ಲದೇ, ತೈಲ ಮಾರಾಟ ಸಂಸ್ಥೆಗಳು ಈ ಬಗ್ಗೆ ಆಹಾರ ಸಚಿವಾಲಯಕ್ಕೂ ಪರಿಷ್ಕೃತ ಒಪ್ಪಂದದ ಬಗ್ಗೆ ಕೋರಿಕೆ ಸಲ್ಲಿಸಲಿವೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕವಷ್ಟೇ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳು ಎಷ್ಟು ಪ್ರಮಾಣದಲ್ಲಿ ಎಥೆನಾಲ್‌ ಪೂರೈಸಬೇಕು ಎಂಬುದು ಸ್ಪಷ್ಟವಾಗಲಿದೆ ಎಂದು ವಿವರಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.