ADVERTISEMENT

ಬಾಸ್ಮತಿಯೇತರ ಅಕ್ಕಿ: ಎಂಇಪಿ ರದ್ದು

ಪಿಟಿಐ
Published 23 ಅಕ್ಟೋಬರ್ 2024, 15:45 IST
Last Updated 23 ಅಕ್ಟೋಬರ್ 2024, 15:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಬಾಸ್ಮತಿಯೇತರ ಅಕ್ಕಿ ಮೇಲೆ ವಿಧಿಸಿದ್ದ ಕನಿಷ್ಠ ರಫ್ತು ದರವನ್ನು (ಎಂಇಪಿ) ಕೇಂದ್ರ ಸರ್ಕಾರವು, ಬುಧವಾರ ರದ್ದುಪಡಿಸಿದೆ.

ಪ್ರತಿ ಟನ್‌ಗೆ 490 ಡಾಲರ್‌ (₹41,197) ಎಂಇಪಿ ನಿಗದಿಪಡಿಸಲಾಗಿತ್ತು. ಬಾಸ್ಮತಿಯೇತರ ಅಕ್ಕಿ ಮೇಲಿನ ರಫ್ತು ನಿಷೇಧವನ್ನು ಕಳೆದು ತಿಂಗಳು ವಾ‍ಪಸ್ ಪಡೆದಿದೆ. 

ಎಂಇಪಿ ರದ್ದತಿ ಆದೇಶವು ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ವಿದೇಶಿ ವ್ಯಾಪಾರದ ಮಹಾ ನಿರ್ದೇಶನಾಲಯ (ಡಿಜಿಎಫ್‌ಟಿ) ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.