ADVERTISEMENT

ವಿಮಾನ ಇಳಿದಾಣ ಅಭಿವೃದ್ಧಿಗೆ ವಿಮಾನಯಾನ ಸಚಿವಾಲಯ ಒತ್ತು

ಪಿಟಿಐ
Published 6 ಜೂನ್ 2024, 14:30 IST
Last Updated 6 ಜೂನ್ 2024, 14:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮುಂಬೈ: ದೇಶದಲ್ಲಿ ವಿಮಾನ ಇಳಿದಾಣಗಳನ್ನು (ಏರ್‌ಸ್ಟ್ರಿಪ್‌) ಅಭಿವೃದ್ಧಿಪಡಿಸುವ ಮೂಲಕ ದೊಡ್ಡ ಹಾಗೂ ಸಣ್ಣ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಬಲಪಡಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ನಿರ್ಧರಿಸಿದೆ.

ಭಾರತದಲ್ಲಿ ನಾಗರಿಕ ವಿಮಾನಯಾನ ಮಾರುಕಟ್ಟೆಯು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ದೇಶೀಯ ಮಾರ್ಗದಲ್ಲಿ ಪ್ರಯಾಣಿಕರ ಸಂಚಾರದಲ್ಲೂ ಏರಿಕೆಯಾಗಿದೆ. ಹಾಗಾಗಿ, ವಿಮಾನಯಾನ ಕಂಪನಿಗಳು ತನ್ನ ವಿಮಾನಗಳ ಸಂಖ್ಯೆ ಮತ್ತು ಕಾರ್ಯಾಚರಣೆಯನ್ನು ವಿಸ್ತರಿಸುತ್ತಿವೆ.  

ADVERTISEMENT

‘ದೇಶದಲ್ಲಿ ಕಳೆದ ಹತ್ತು ವರ್ಷದ ಹಿಂದೆ 74 ವಿಮಾನ ನಿಲ್ದಾಣಗಳಿದ್ದವು. ಈಗ ಅವುಗಳ ಸಂಖ್ಯೆ 157ಕ್ಕೇರಿದೆ’ ಎಂದು ಸಚಿವಾಲಯದ ಕಾರ್ಯದರ್ಶಿ ವುಮ್ಲುನ್ಮಾಂಗ್ ವುಲ್ನಂ ತಿಳಿಸಿದ್ದಾರೆ.

‘ಒಟ್ಟು 453 ವಿಮಾನ ಇಳಿದಾಣಗಳಿದ್ದು, ಈ ಪೈಕಿ 157 ಕಾರ್ಯಾಚರಣೆ ನಡೆಸುತ್ತಿವೆ. ಕೆಲವೆಡೆ ಈ ಹಿಂದೆ ಬಳಕೆಯಾಗುತ್ತಿದ್ದ ಹಲವು ಇಳಿದಾಣಗಳು ನಿರುಪಯುಕ್ತವಾಗಿವೆ. ಮತ್ತಷ್ಟು ಇಳಿದಾಣಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದ್ದಾರೆ.

ನಾಗರಿಕ ವಿಮಾನಗಳ ಕಾರ್ಯಾಚರಣೆಗಾಗಿ ಸಚಿವಾಲಯ ಮತ್ತು ರಕ್ಷಣೆ ಇಲಾಖೆಯಿಂದ ಜಂಟಿಯಾಗಿ ವಾಯುನೆಲೆಗಳನ್ನು ಅಭಿವೃದ್ಧಿಸಲಾಗುವುದು. ಇಳಿದಾಣಗಳ ಅಭಿವೃದ್ಧಿಯಿಂದಾಗಿ ಟೈರ್‌ 2 ಮತ್ತು ಟೈರ್‌ 3 ನಗರಗಳ ನಡುವೆ ವಿಮಾನ ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.