ADVERTISEMENT

ಭಾರತ್‌ ಬಾಂಡ್‌ ಇಟಿಎಫ್‌: ₹10 ಸಾವಿರ ಕೋಟಿ ಸಂಗ್ರಹ ನಿರೀಕ್ಷೆ

ಪಿಟಿಐ
Published 24 ಅಕ್ಟೋಬರ್ 2021, 15:10 IST
Last Updated 24 ಅಕ್ಟೋಬರ್ 2021, 15:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರವು ಭಾರತ್ ಬಾಂಡ್ ಇಟಿಎಫ್‌ನ ಮೂರನೇ ಕಂತನ್ನು ಡಿಸೆಂಬರ್‌ ವೇಳೆಗೆ ಬಿಡುಗಡೆ ಮಾಡಲಿದ್ದು, ₹ 10 ಸಾವಿರ ಕೋಟಿ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಲ್ಲಿ ಸಂಗ್ರಹ ಆಗುವ ಬಂಡವಾಳವನ್ನು ಕೇಂದ್ರೋದ್ಯಮಗಳ ಅಭಿವೃದ್ಧಿ ಯೋಜನೆಗಳಿಗೆ ಬಳಸುವ ಆಲೋಚನೆಯನ್ನು ಸರ್ಕಾರ ಹೊಂದಿದೆ ಎಂದೂ ಅವರು ಹೇಳಿದ್ದಾರೆ.

2020ರ ಜುಲೈನಲ್ಲಿ ಬಿಡುಗಡೆ ಮಾಡಿದ್ದ ಎರಡನೇ ಕಂತಿನಲ್ಲಿ ₹ 11 ಸಾವಿರ ಕೋಟಿ ಸಂಗ್ರಹ ಆಗಿತ್ತು. 2019ರ ಡಿಸೆಂಬರ್‌ನಲ್ಲಿ ಮೊದಲ ಕಂತಿನಲ್ಲಿ ₹ 12,400 ಕೋಟಿ ಬಂಡವಾಳ ಸಂಗ್ರಹ ಆಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.