ನವದೆಹಲಿ: ಕೇಂದ್ರ ಸರ್ಕಾರವು 2025–26ನೇ ಆರ್ಥಿಕ ವರ್ಷದೊಳಗೆ ಪೆಟ್ರೋಲ್‌ನೊಂದಿಗೆ ಎಥೆನಾಲ್ ಮಿಶ್ರಣದ ಗುರಿಯನ್ನು ಶೇ 20ರಷ್ಟಕ್ಕೆ ಹೆಚ್ಚಿಸಲು ತೀರ್ಮಾನಿಸಿದೆ. ಹಾಗಾಗಿ, ಪ್ರಸಕ್ತ ಋತುವಿನ ಸಕ್ಕರೆ ಮಾರುಕಟ್ಟೆ ವರ್ಷದಲ್ಲಿ (ನವೆಂಬರ್–ಅಕ್ಟೋಬರ್) ಎಥೆನಾಲ್ ಬೆಲೆಯನ್ನು ಏರಿಕೆ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ದರ ಪರಿಷ್ಕರಣೆ ಬಗ್ಗೆ ಈಗಾಗಲೇ ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ನೇತೃತ್ವದ ಸಮಿತಿಯು ಒಂದು ಸುತ್ತಿನ ಮಾತುಕತೆ ನಡೆಸಿದೆ.
2022–23ರ ಮಾರುಕಟ್ಟೆ ವರ್ಷದಿಂದ ಸರ್ಕಾರವು ಎಥೆನಾಲ್ ಬೆಲೆಯನ್ನು ಪರಿಷ್ಕರಿಸಿಲ್ಲ. ಪ್ರಸ್ತುತ ಕಬ್ಬಿನ ಹಾಲಿನಿಂದ ಉತ್ಪಾದಿಸುವ ಎಥೆನಾಲ್ ಬೆಲೆ ಪ್ರತಿ ಲೀಟರ್‌ಗೆ ₹65.61 ಇದೆ. ಬಿ–ಹೆವಿ ಮತ್ತು ಸಿ–ಹೆವಿ ಮೊಲಾಸಿಸ್‌ನಿಂದ (ಕಾಕಂಬಿ) ಉತ್ಪಾದಿಸುವ ಎಥೆನಾಲ್ ದರವು ಕ್ರಮವಾಗಿ ₹60.73 ಮತ್ತು ₹56.28 ಇದೆ.
ಪ್ರಸ್ತುತ ಜುಲೈ ಅಂತ್ಯಕ್ಕೆ ಪೆಟ್ರೋಲ್‌ನೊಂದಿಗೆ ಎಥೆನಾಲ್ ಮಿಶ್ರಣ ಪ್ರಮಾಣವು ಶೇ 13.3ರಷ್ಟಿದೆ.
ದೇಶದ ಒಟ್ಟು ಎಥೆನಾಲ್ ಉತ್ಪಾದನಾ ಸಾಮರ್ಥ್ಯವು 1,589 ಕೋಟಿ ಲೀಟರ್ ಆಗಿದೆ. 2023–24ರಲ್ಲಿ ತೈಲ ಕಂಪನಿಗಳು 505 ಕೋಟಿ ಲೀಟರ್ ಎಥೆನಾಲ್ ಖರೀದಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.