ADVERTISEMENT

ಉತ್ತಮ ಮಳೆ: ದೇಶದಲ್ಲಿ 12 ಕೋಟಿ ಟನ್‌ ಅಕ್ಕಿ ಉತ್ಪಾದನೆ ನಿರೀಕ್ಷೆ

ಪಿಟಿಐ
Published 5 ನವೆಂಬರ್ 2024, 13:53 IST
Last Updated 5 ನವೆಂಬರ್ 2024, 13:53 IST
ಅಕ್ಕಿ
ಅಕ್ಕಿ   

ನವದೆಹಲಿ: ಉತ್ತಮ ಮಳೆಯಿಂದಾಗಿ 2024–25ರ ಮುಂಗಾರು ಋತುವಿನಲ್ಲಿ (ಖಾರಿಫ್‌) ದೇಶದಲ್ಲಿ ಅಕ್ಕಿ ಉತ್ಪಾದನೆ 11.99 ಕೋಟಿ ಟನ್‌ಗೆ ತಲುಪುವ ನಿರೀಕ್ಷೆಯಿದೆ ಎಂದು ಕೇಂದ್ರ ಕೃಷಿ ಸಚಿವಾಲಯದ ಮೊದಲ ಅಂದಾಜು ವರದಿ ಮಂಗಳವಾರ ಹೇಳಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಉತ್ಪಾದನೆಯಲ್ಲಿ 66.7 ಲಕ್ಷ ಟನ್‌ನಷ್ಟು ಹೆಚ್ಚಳವಾಗಲಿದೆ.

ಮೆಕ್ಕೆಜೋಳ ಸಾರ್ವಕಾಲಿಕ ಗರಿಷ್ಠ 2.45 ಕೋಟಿ ಟನ್‌, ಜೋಳ 21.9 ಲಕ್ಷ ಟನ್‌, ಸಜ್ಜೆ ಉತ್ಪಾದನೆ 93.7 ಲಕ್ಷ ಟನ್‌ ಆಗಲಿದೆ ಎಂದು ಅಂದಾಜಿಸಿದೆ.

ADVERTISEMENT

ಪ್ರಸಕ್ತ ಮುಂಗಾರು ಋತುವಿನಲ್ಲಿ ಒಟ್ಟು ಆಹಾರ ಧಾನ್ಯಗಳ ಉತ್ಪಾದನೆ 16.47 ಕೋಟಿ ಟನ್‌ ಆಗಲಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 15.57 ಕೋಟಿ ಟನ್‌ನಷ್ಟಾಗಿತ್ತು. ಬೇಳೆಕಾಳುಗಳ ಉತ್ಪಾದನೆ 69.5 ಲಕ್ಷ ಟನ್‌, ಎಣ್ಣೆ ಕಾಳುಗಳ ಉತ್ಪಾದನೆ 2.57 ಕೋಟಿ ಟನ್‌ ಆಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.