ADVERTISEMENT

ಶತ್ರುಗಳಿಗೆ ಸೇರಿದ 2.91 ಲಕ್ಷ ಷೇರು ಮಾರಾಟಕ್ಕೆ ನಿರ್ಧಾರ

ಪಿಟಿಐ
Published 11 ಜನವರಿ 2024, 20:45 IST
Last Updated 11 ಜನವರಿ 2024, 20:45 IST
<div class="paragraphs"><p> ಷೇರು ಮಾರುಕಟ್ಟೆ</p></div>

ಷೇರು ಮಾರುಕಟ್ಟೆ

   

ನವದೆಹಲಿ: ಕೇಂದ್ರ ಸರ್ಕಾರವು ತನ್ನ ಸ್ವಾಧೀನದಲ್ಲಿ ಇರುವ ‘ಶತ್ರುಗಳ ಸ್ವತ್ತು’ ಎಂದು ವರ್ಗೀಕರಿಸಲಾದ 2.91 ಲಕ್ಷ ಷೇರುಗಳನ್ನು ಮಾರಾಟ ಮಾಡುವುದಾಗಿ ಗುರುವಾರ ಹೇಳಿದೆ.

ದೇಶದ 84 ಕಂಪನಿಗಳಲ್ಲಿ ಶತ್ರುಗಳಿಗೆ ಸೇರಿದ ಷೇರುಗಳಿವೆ. ಇವುಗಳ ಒಡೆತನ ಹೊಂದಿದವರು ಸದ್ಯ ಭಾರತದಲ್ಲಿ ಇಲ್ಲ. ಪಾಕಿಸ್ತಾನ ಹಾಗೂ ಚೀನಾಕ್ಕೆ ವಲಸೆ ಹೋಗಿದ್ದಾರೆ ಎಂದು ಹೇಳಿದೆ. 

ADVERTISEMENT

ಮೊದಲ ಹಂತದಲ್ಲಿ 20 ಕಂಪನಿಗಳಲ್ಲಿ ಇರುವ 1.88 ಲಕ್ಷ ಷೇರುಗಳ ಮಾರಾಟಕ್ಕೆ ಮುಂದಾಗಿದೆ. ಎನ್‌ಆರ್‌ಐ, ಹಿಂದೂ ಅವಿಭಕ್ತ ಕುಟುಂಬ, ಅರ್ಹ ಸಾಂಸ್ಥಿಕ ಹೂಡಿಕೆದಾರರು (ಕ್ಯೂಐಬಿ), ಟ್ರಸ್ಟ್‌ಗಳು, ಕಂಪನಿಗಳು ಸೇರಿದಂತೆ ಹತ್ತು ವಿಭಾಗಗಳಲ್ಲಿ ಷೇರುಗಳ ಮಾರಾಟಕ್ಕೆ ಫೆಬ್ರುವರಿ 8ರಂದು ಬಿಡ್‌ ಆಹ್ವಾನಿಸಲಾಗುವುದು ಎಂದು ತಿಳಿಸಿದೆ.

1947ರಿಂದ 1962ರ ಅವಧಿಯಲ್ಲಿ ಈ ಷೇರುಗಳ ಒಡೆತನ ಹೊಂದಿರುವವರು ಭಾರತವನ್ನು ತ್ಯಜಿಸಿ ಪಾಕಿಸ್ತಾನ ಹಾಗೂ ಚೀನಾ ಹೋಗಿ ಅಲ್ಲಿನ ಪೌರತ್ವ ಪಡೆದಿದ್ದಾರೆ. ಅಂತಹವರಿಗೆ ಸೇರಿರುವ ಈ ಷೇರುಗಳನ್ನು ‘ಶತ್ರುಗಳ ಸ್ವತ್ತು’ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.