ADVERTISEMENT

ನವೀಕರಿಸಬಹುದಾದ ಇಂಧನ | ಗುರಿ ಸಾಧನೆಗೆ ಕಾರ್ಯಪಡೆ ರಚನೆ: ಪ್ರಲ್ಹಾದ ಜೋಶಿ

ಪಿಟಿಐ
Published 15 ನವೆಂಬರ್ 2024, 14:10 IST
Last Updated 15 ನವೆಂಬರ್ 2024, 14:10 IST
<div class="paragraphs"><p>ಪ್ರಲ್ಹಾದ ಜೋಶಿ</p></div>

ಪ್ರಲ್ಹಾದ ಜೋಶಿ

   

ನವದೆಹಲಿ: ‘ಸರ್ಕಾರವು 2030ರ ವೇಳೆಗೆ 500 ಗಿಗಾವಾಟ್‌ನಷ್ಟು ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಗುರಿ ಹೊಂದಿದೆ. ಈ ಕಾರ್ಯ ಸಾಧನೆಗಾಗಿ ಕೇಂದ್ರ ವಿದ್ಯುತ್‌ ಸಚಿವಾಲಯದ ಸಲಹೆ ಮೇರೆಗೆ ಕಾರ್ಯಪಡೆ ರಚಿಸಲು ನಿರ್ಧರಿಸಲಾಗಿದೆ’ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ನಿಗದಿತ ಅವಧಿಯೊಳಗೆ ಈ ಗುರಿ ಸಾಧಿಸಲು ಇಂಧನ ವಲಯದ ಪ್ರಮುಖರು ಮತ್ತು ಮಧ್ಯಸ್ಥಗಾರರು ಇದಕ್ಕೆ ಪೂರಕವಾದ ಕಾರ್ಯತಂತ್ರವನ್ನು ರೂಪಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಈಗಾಗಲೇ, ಭಾರತವು ಪಳೆಯುಳಿಕೆಯಲ್ಲದ ಇಂಧನ ಮೂಲಗಳಿಂದ 212 ಗಿಗಾವಾಟ್‌ನಷ್ಟು ಇಂಧನ ಉತ್ಪಾದಿಸಿದೆ. ಮುಂದಿನ ಆರು ವರ್ಷದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ನಿಗದಿತ ಗುರಿ ಸಾಧಿಸಲಾಗುವುದು ಎಂದು ಹೇಳಿದ್ದಾರೆ.

ನವೀಕರಿಸಬಹುದಾದ ಇಂಧನ ಹೂಡಿಕೆ ಸಮಾವೇಶದಲ್ಲಿ 540 ಗಿಗಾವಾಟ್‌ ಉತ್ಪಾದನೆಗೆ ₹32 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇಷ್ಟು ಮೊತ್ತವು ಈ ವಲಯದಲ್ಲಿ ಹೂಡಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.