ADVERTISEMENT

ಆಯ್ದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಹೆಚ್ಚಳ

ಪಿಟಿಐ
Published 30 ಜೂನ್ 2023, 16:20 IST
Last Updated 30 ಜೂನ್ 2023, 16:20 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರವು ಕೆಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಜುಲೈ–ಸೆಪ್ಟೆಂಬರ್‌ ಅವಧಿಗೆ ಶೇಕಡ 0.3ರವರೆಗೆ ಹೆಚ್ಚಿಸಿದೆ. ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಬಡ್ಡಿದರವು ಗರಿಷ್ಠ ಮಟ್ಟದಲ್ಲಿ ಇರುವುದಕ್ಕೆ ಹೊಂದುವಂತೆ ಈ ಪರಿಷ್ಕರಣೆ ಮಾಡಲಾಗಿದೆ.

ಹಣಕಾಸು ಸಚಿವಾಲಯದ ಪ್ರಕಟಣೆಯಂತೆ, ಐದು ವರ್ಷಗಳ ಅವಧಿಯ ನಿಶ್ಚಿತ ಠೇವಣಿ (ಆರ್‌.ಡಿ.) ಬಡ್ಡಿದರವನ್ನು ಶೇ 0.3ರಷ್ಟು ಹೆಚ್ಚಳ ಮಾಡಿದ್ದು, ಬಡ್ಡಿ ದರವು ಶೇ 6.2ರಿಂದ ಶೇ 6.5ಕ್ಕೆ ಏರಿಕೆ ಆಗಿದೆ.

ಅಂಚೆ ಕಚೇರಿಯ ಒಂದು ವರ್ಷದ ಅವಧಿ ಠೇವಣಿಯ ಬಡ್ಡಿದರವು ಶೇ 0.1ರಷ್ಟು ಹೆಚ್ಚಾಗಿದ್ದು ಶೇ 6.9ಕ್ಕೆ ತಲುಪಿದೆ. ಎರಡು ವರ್ಷಗಳ ಅವಧಿ ಠೆವಣಿಯ ಬಡ್ಡಿದರವು ಶೇ 6.9ರಿಂದ ಶೇ 7ಕ್ಕೆ ಏರಿಕೆ ಆಗಿದೆ.

ADVERTISEMENT

3 ಮತ್ತು 5 ವರ್ಷಗಳ ಅವಧಿ ಠೇವಣಿಗಳ ಬಡ್ಡಿದರವನ್ನು ಕ್ರಮವಾಗಿ ಶೇ 7 ಮತ್ತು ಶೇ 7.5ರಲ್ಲಿಯೇ ಉಳಿಸಿಕೊಳ್ಳಲಾಗಿದೆ.

ಸುಕನ್ಯಾ ಸಮೃದ್ಧಿ (ಶೇ 8), ಪಿಪಿಎಫ್‌ (ಶೇ 7.1), ಉಳಿತಾಯ ಠೇವಣಿ (ಶೇ 4), ರಾಷ್ಟ್ರೀಯ ಉಳಿತಾಯ ಪತ್ರ (ಶೇ 7.7), ಹಿರಿಯ ನಾಗರಿಕರ ಉಳಿತಾಯ ಯೋಜನೆ (ಶೇ 8.2), ಕಿಸಾನ್ ವಿಕಾಸ ಪತ್ರದ (ಶೇ 7.5) ಬಡ್ಡಿದರಗಳಲ್ಲಿ ಬದಲಾವಣೆ ಮಾಡಿಲ್ಲ. ತಿಂಗಳ ಆದಾಯ ಯೋಜನೆಗಳ ಬಡ್ಡಿದರದಲ್ಲಿಯೂ (ಶೇ 7.4) ಬದಲಾವಣೆ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.