ADVERTISEMENT

ಪಿ.ಎಫ್‌: ಶೇ 8.15ರಷ್ಟು ಬಡ್ಡಿ ನೀಡುವ ಶಿಫಾರಸಿಗೆ ಹಣಕಾಸು ಸಚಿವಾಲಯ ಸಮ್ಮತಿ

ಪಿಟಿಐ
Published 24 ಜುಲೈ 2023, 20:30 IST
Last Updated 24 ಜುಲೈ 2023, 20:30 IST
ಪಿ.ಎಫ್‌ ಕೊಡುಗೆ ಶೇ 12ರಿಂದ 10ಕ್ಕೆ ಕಡಿತ ಸಾಧ್ಯತೆ
ಪಿ.ಎಫ್‌ ಕೊಡುಗೆ ಶೇ 12ರಿಂದ 10ಕ್ಕೆ ಕಡಿತ ಸಾಧ್ಯತೆ   

ನವದೆಹಲಿ: 2022–23ನೆಯ ಹಣಕಾಸು ವರ್ಷಕ್ಕೆ ಪಿ.ಎಫ್‌. ಚಂದಾದಾರರಿಗೆ ಶೇಕಡ 8.15ರಷ್ಟು ಬಡ್ಡಿ ನೀಡುವ ಶಿಫಾರಸಿಗೆ ಕೇಂದ್ರ ಹಣಕಾಸು ಸಚಿವಾಲಯವು ಅನುಮೋದನೆ ನೀಡಿದೆ.

ನೌಕರರ ಭವಿಷ್ಯ ನಿಧಿ ಸಂಘಟನೆಯು ಈ ವರ್ಷದ ಮಾರ್ಚ್‌ 28ರಂದು ನಡೆದ ಸಭೆಯಲ್ಲಿ, ಬಡ್ಡಿ ದರವನ್ನು ಶೇ 8.15ಕ್ಕೆ ನಿಗದಿ ಮಾಡಿತ್ತು.

ಸೋಮವಾರ ಆದೇಶವೊಂದನ್ನು ಹೊರಡಿಸಿರುವ ಸಂಘಟನೆಯು, ಕ್ಷೇತ್ರ ಅಧಿಕಾರಿಗಳು ಶೇ 8.15ರಷ್ಟು ಬಡ್ಡಿಯನ್ನು ಪಿ.ಎಫ್‌. ಚಂದಾದಾರರಿಗೆ ಪಾವತಿಸಬೇಕು ಎಂದು ಸೂಚಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.