ADVERTISEMENT

ಗೋಧಿ ದಾಸ್ತಾನಿಗೆ ಮಿತಿ ಹೇರಿಕೆ

ಪಿಟಿಐ
Published 14 ಸೆಪ್ಟೆಂಬರ್ 2024, 14:37 IST
Last Updated 14 ಸೆಪ್ಟೆಂಬರ್ 2024, 14:37 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಮಾರುಕಟ್ಟೆಯಲ್ಲಿ ಗೋಧಿ ಧಾರಣೆಯು ಏರಿಕೆ ಕಾಣುತ್ತಿರುವುದರಿಂದ ಕೇಂದ್ರ ಸರ್ಕಾರವು, ಗೋಧಿ ದಾಸ್ತಾನು ಮಿತಿಯನ್ನು ಮತ್ತಷ್ಟು ತಗ್ಗಿಸಿದೆ. 

ಎರಡು ತಿಂಗಳ ಹಿಂದೆ ವರ್ತಕರು, ಸಗಟುದಾರರು 3 ಸಾವಿರ ಟನ್‌ವರೆಗೂ ದಾಸ್ತಾನು ಮಾಡಿಟ್ಟುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಹೊಸ ನಿಯಮಾವಳಿ ಅನ್ವಯ ಇದನ್ನು 2 ಸಾವಿರ ಟನ್‌ಗೆ ಇಳಿಸಿದೆ. ಮುಂದಿನ ವರ್ಷದ ಮಾರ್ಚ್‌ ಅಂತ್ಯದವರೆಗೆ ಈ ಪರಿಷ್ಕೃತ ಆದೇಶ ಜಾರಿಯಲ್ಲಿ ಇರಲಿದೆ ಎಂದು ಸರ್ಕಾರ ಹೇಳಿದೆ.

ಚಿಲ್ಲರೆ ಮತ್ತು ದೊಡ್ಡ ಮಾರಾಟಗಾರರು ಪ್ರತಿ ಚಿಲ್ಲರೆ ಮಳಿಗೆಗೆ 10 ಟನ್‌ ದಾಸ್ತಾನಿಟ್ಟುಕೊಳ್ಳಬಹುದಾಗಿದೆ. ಸಂಸ್ಕರಣೆ ಮಾಡುವವರು ಮಾಸಿಕ ಸಂಸ್ಕರಣಾ ಸಾಮರ್ಥ್ಯದ ಪೈಕಿ ಶೇ 60ರಷ್ಟು ಗೋಧಿಯನ್ನು ಮಾತ್ರವೇ ದಾಸ್ತಾನು ಮಾಡಿಟ್ಟುಕೊಳ್ಳಲು ಅವಕಾಶವಿದೆ.

ADVERTISEMENT

ಪ್ರತಿಯೊಬ್ಬರು ದಾಸ್ತಾನಿನ ಬಗ್ಗೆ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪೋರ್ಟಲ್‌ನಲ್ಲಿ ಪ್ರತಿದಿನ ಮಾಹಿತಿಯನ್ನು ಅಪ್‌ಲೋಡ್‌ ಮಾಡುವುದು ಕಡ್ಡಾಯವಾಗಿದೆ.

ಕೇಂದ್ರ ಮತ್ತು ರಾಜ್ಯಮಟ್ಟದ ಅಧಿಕಾರಿಗಳು ನಿಯಮಿತವಾಗಿ ಗೋಧಿ ದಾಸ್ತಾನನ್ನು ಪರಿಶೀಲಿಸಲಿದ್ದಾರೆ. ಮಾರುಕಟ್ಟೆಯಲ್ಲಿ ಕೃತಕವಾಗಿ ಅಭಾವ ಸೃಷ್ಟಿಸಿ ಬೆಲೆ ಏರಿಕೆ ಮಾಡುವುದಕ್ಕೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದೆ.

ಜೂನ್‌ನಲ್ಲಿ ಗೋಧಿ ದಾಸ್ತಾನಿಗೆ ಮಿತಿ ಹೇರಿದ್ದರಿಂದ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆಯಲ್ಲಿ ಇಳಿಕೆಯಾಗಿದೆ. ಪಡಿತರ ವ್ಯವಸ್ಥೆ ಹಾಗೂ ಇತರೆ ಕಲ್ಯಾಣ ಯೋಜನೆಯಡಿ ವಿತರಣೆಗೆ ಅಗತ್ಯವಿರುವಷ್ಟು ಗೋಧಿಯನ್ನು ಕಾಪು ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದೆ. 

ಶುಕ್ರವಾರದಂದು ದೇಶದಲ್ಲಿ ಕೆ.ಜಿ ಗೋಧಿಯ ಚಿಲ್ಲರೆ ದರ ₹31.06 ಇದ್ದರೆ, ಗೋಧಿ ಹಿಟ್ಟಿನ ದರ ₹35.97 ಇದೆ.

ಸಾಂಕೇತಿಕ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.