ನವದೆಹಲಿ: ವೊಡಾಫೋನ್ ಐಡಿಯಾ ಕಂಪನಿಯ ಷೇರು ಮೌಲ್ಯವು ₹ 10 ಅಥವಾ ಅದಕ್ಕೂ ಹೆಚ್ಚಿನ ಮಟ್ಟದಲ್ಲಿ ಸ್ಥಿರಗೊಂಡಾಗ ಕೇಂದ್ರ ಸರ್ಕಾರವು ಕಂಪನಿಯ ಷೇರುಪಾಲನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಕಂಪನಿಯ ಷೇರು ಮೌಲ್ಯವು ಏಪ್ರಿಲ್ 19ರ ನಂತರ ₹ 10ಕ್ಕಿಂತ ಕಡಿಮೆ ಮಟ್ಟದಲ್ಲಿದೆ. ಸಾಲದ ಸುಳಿಗೆ ಸಿಲುಕಿರುವ ವೊಡಾಫೋನ್ ಐಡಿಯಾ ಕಂಪನಿಯು ಕೇಂದ್ರಕ್ಕೆ ಪಾವತಿ ಮಾಡಬೇಕಿರುವ ₹ 16 ಸಾವಿರ ಕೋಟಿ ಬಡ್ಡಿಯ ಬದಲು ಕಂಪನಿಯ ಶೇ 33ರಷ್ಟು ಷೇರುಗಳನ್ನು ವರ್ಗಾವಣೆ ಮಾಡಲು ತೀರ್ಮಾನಿಸಿದೆ. ಈ ವರ್ಗಾವಣೆಯ ನಂತರ ಕಂಪನಿಯಲ್ಲಿ ಪ್ರವರ್ತಕರ ಷೇರು ಪಾಲು ಶೇ 50ಕ್ಕೆ ಇಳಿಕೆಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.